ಮಧೂರು : ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ಕ್ಷೇತ್ರದಲ್ಲಿ 21ನೇ ಅಯ್ಯಪ್ಪ ಭಜನೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಸಂಪನ್ನಗೊಂಡಿತು. ಬೆಳಗ್ಗೆ ಗಣಪತಿ ಹೋಮದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಅನ್ನದಾನ ನಡೆಯಿತು. ಸಂಜೆ ಯು.ಸುಬ್ರಹ್ಮಣ್ಯ ಆಸ್ರರವರು ದೀಪ ಪ್ರಜ್ವಲಿಸಿ ಭಜನೆಗೆ ಚಾಲನೆ ನೀಡಿದರು. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀದೇವರಿಗೆ ಮಂಗಳಾರತಿಯೊಂದಿಗೆ ದೀಪ ವಿಸರ್ಜಿಸಲಾಯಿತು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರವರು ಶ್ರೀ ಅಯ್ಯಪ್ಪ ಭಜನೋತ್ಸವಕ್ಕೆ ನೇತೃತ್ವ ವಹಿಸಿದರು.
ವಿಠಲಗಟ್ಟಿ ಪರಕ್ಕಿಲ ಸ್ವಾಗತಿಸಿ,ಸಂತೋಷ್ ಆರ್ ಗಟ್ಟಿ ವಂದಿಸಿದರು. ದಿವ್ಯಾಗಟ್ಟಿ ಪರಕ್ಕಿಲ ನಿರೂಪಿಸಿದರು. ಬಾಲಕೃಷ್ಣ ಉಳಿಯ,ಅಜಿತ್, ಪದ್ಮರಾಜ ಪರಕ್ಕಿಲ, ರಾಜೇಶ್ ಉಳಿಯ, ಉದಯ ಉಳಿಯ, ಹರೀಶ್ ಪರಕ್ಕಿಲ, ಸೇರಿದಂತೆ ಸ್ಥಳೀಯ ತರುಣ ಕಲಾವೃಂದ(ರಿ) ಉಳಿಯ, ಟಿ. ಕೆ. ವಿ ಮಹಿಳಾ ಸಮಿತಿ,ಕುಟುಂಬಶ್ರೀ, ಸ್ವ ಸಹಾಯ ಸಂಘ ಮುಂತಾದ ಸಂಘ ಸಂಸ್ಥೆಗಳ ಸಕ್ರಿಯ ಕಾರ್ಯಕರ್ತರು ನೇತೃತ್ವ ವಹಿಸಿದ್ದರು.