ಕುಂಬಳೆ: ಅಂಗಡಿಮೊಗರು ಸಮೀಪದ ಇತಿಹಾಸ ಪ್ರಸಿದ್ದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದಲ್ಲಿ ವರ್ಷಂಪ್ರತಿ ಜರಗುವ ಧನುಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಧನುಪೂಜಾ ಸಮಿತಿ ಪದಾಧಿಕಾರಿಗಳಾದ ಡಿ.ದಾಮೋದರನ್, ಶಂಕರ ರೈ ಮಾಸ್ತರ್, ಡಿ.ರಾಜೇಂದ್ರ ರೈ, ಡಿ.ಎನ್ .ರಾಧಾಕೃಷ್ಣ ,ಶಿವಪ್ಪ ರೈ ಕೊರತ್ತಿಪಾರೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡಿ.17ರಿಂದ ಜನವರಿ 14 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಧನುಪೂಜಾ ಮಹೋತ್ಸವ ನಡೆಯಲಿದೆ. ಬೆಳಗ್ಗೆ ವಿಶೇಷ ದೀಪಾರಾಧನೆ, ವಿವಿಧ ತಂಡಗಳ ಭಜನೆ ಸಂಕೀರ್ತನೆ, ಬೆಳಗ್ಗೆ 6 ಗಂಟೆಗೆ ಪೂಜೆ ಬಳಿಕ ಪ್ರಸಾದ ವಿತರಣೆ ಜರಗಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಮಿತಿ ರಚಿಸಲಾಗಿದ್ದು ಹಲವರು ಮಂದಿ ಕಾರ್ಯಕರ್ತರು ಕ್ಷೇತ್ರದಲ್ಲಿ ನಡೆಯುವ ಶ್ರಮದಾನದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕ್ಷೇತ್ರ ಆಡಳಿತ ಸಮಿತಿ ತಿಳಿಸಿದೆ.