ನವದೆಹಲಿ: ಮೊಬೈಲ್ ಫೋನ್‌ಗಳು ಈಗ ಮನೆಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಪಾತ್ರವಹಿಸುತ್ತಿವೆ ಎಂದು ರಾಜ್ಯಸಭೆಯಲ್ಲಿ ಹೇಳಿದ ಎನ್‌ಸಿಪಿ ಸಂಸದೆ ಫೌಜಿಯಾ ಖಾನ್ ಅವರು, ಮಕ್ಕಳ ಸ್ಕ್ರೀನ್ ಸಮಯವನ್ನು ಕಡಿಮೆಗೊಳಿಸಲು ಸಮಗ್ರ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಅಧಿವೇಶನದ ಶೂನ್ಯ ಅವಧಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, 'ತಂತ್ರಜ್ಞಾನವು ನಮ್ಮ ಜೀವನ ಹಲವು ಅಂಶಗಳ ಮೇಲೆ ಪರಿಣಾಮ ಬೀರುತ್ತಿರುವುದನ್ನು ತೆಗೆದುಹಾಕುವಂತಿಲ್ಲ. ಆದರೆ ಮಕ್ಕಳು ಹೆಚ್ಚಿನ ಸಮಯವನ್ನು ಮೊಬೈಲ್ ಮುಂದೆಯೇ ಕಳೆಯುತ್ತಾರೆ. ಇದರಿಂದ ಅವರ ವ್ಯಕ್ತಿತ್ವ ವಿಕಸನದ, ಕಣ್ಣಿನ ದೃಷ್ಟಿ, ಗ್ರಹಿಕೆ ಮತ್ತು ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ದೈಹಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ' ಎಂದು ಹೇಳಿದರು.
ಒಂದು ಗಂಟೆಗೂ ಹೆಚ್ಚಿನ ಅವಧಿಗೆ ಮೊಬೈಲ್ ಸ್ಕ್ರೀನ್ ನೋಡುವುದರಿಂದ ಮಕ್ಕಳಲ್ಲಿ ನಡುವಳಿಕೆ ಸಮಸ್ಯೆಗಳು ತಲೆದೋರುತ್ತವೆ. ಹೀಗಾಗಿ ಮಕ್ಕಳು ಮೊಬೈಲ್ ಸ್ಕ್ರೀನ್ ನೋಡುವ ಅವಧಿಗೂ ಮಿತಿ ಹೇರಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಬಿಜೆಪಿ ಸಂಸದ ಜಗ್ಗೇಶ್ ಅವರು ಮಾತನಾಡಿ, ಸಂಸ್ಥೆಗಳಲ್ಲಿ ನೋಂದಣಿ ಅಥವಾ ಸ್ವಾಗತಕಾರಿಣಿ ಡೆಸ್ಕ್‌ಗಳಿಗೆ ಸ್ಥಳೀಯರನ್ನೇ ನೇಮಕ ಮಾಡಿ ಎಂದು ಕೇಳಿಕೊಂಡರು. ಅನ್ಯರಾಜ್ಯದವರನ್ನು ಉದ್ಯೋಗಗಳಿಗೆ ನೇಮಕಾತಿ ಮಾಡಿಕೊಳ್ಳಲು ತಮ್ಮ ವಿರೋಧವಿಲ್ಲ. ಆದರೆ ನೋಂದಣಿ ಡೆಸ್ಕ್‌ನಲ್ಲಿರುವವರಿಗೆ ಸ್ಥಳೀಯ ಭಾಷೆ ಬರದಿದ್ದರೆ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.