ಕಾಸರಗೋಡು: ಅಯೋಧ್ಯೆಯಿಂದ ಪೂಜಿಸಿ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ನಗರದ ವಿವಿಧ ಪ್ರದೇಶಗಳಿಗೆ ವಿತರಿಸುವ ಕಾರ್ಯ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭ ಆಯೋಜಿಸಲಾದ ಸಭಾ ಕಾರ್ಯಕ್ರಮವನ್ನು ಡಾ. ಶಂಕರ್ ರಾಜ್ ಎಸ್.ವಿ.ಟಿ ಉದ್ಘಾಟಿಸಿದರು.
ಅಖಿಲ ಭಾರತೀಯ ಕುಟುಂಬ ಪ್ರಭೋದನ್ ಟೋಳಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಅಯೋಧ್ಯೆ ಹಿನ್ನಲೆ ಹಾಗೂ ಮಂತ್ರಾಕ್ಷತೆಯ ಮಹತ್ವವನ್ನು ವಿವರಿಸುವ ಮೂಲಕ ಮುಖ್ಯಭಾಷಣ ಮಾಡಿದರು. ವಿಹಿಂಪ ಮುಖಂಡ ಜಯದೇವ ಖಂಡಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀ ವೆಂಕಟ್ರಮಣ ಬಾಲಗೋಕುಲ ಮಕ್ಕಳು ಪ್ರಾರ್ಥನೆ ಹಾಡಿದರು. ವಿ.ಎಚ್.ಪಿ ನೇತಾರ ಕಿರಣ್ ಅಣಂಗೂರು ಸ್ವಾಗತಿಸಿದರು. ಲಕ್ಷ್ಮೀಕಾಂತ ಕಾರ್ಯಕ್ರಮವನ್ನು ನಿರೂಪಿಸಿದರು. ಕೆ.ಎನ್. ಕಮಲಾಕ್ಷ ವಂದಿಸಿದರು.
ಈ ಸಂದರ್ಭ ನಗರದ ವಿವಿಧ ಪ್ರದೇಶಗಳಿಗೆ ಅಲ್ಲಿನ ಪ್ರಮುಖರ ಮೂಲಕ ಮಂತ್ರಾಕ್ಷತೆಯನ್ನು ದೇವಸ್ಥಾನದ ಪ್ರಧಾನ ಅರ್ಚಕ ಶಿವಶಂಕರ ಅಡಿಗ ಹಸ್ತಾಂತರಿಸಿದರು.
ಶ್ರೀ ಮಲ್ಲಿಕಾರ್ಜುನ ಭಾಗದ ಮಂತ್ರಾಕ್ಷತೆಯನ್ನು ಅಯೋಧ್ಯೆ ಕರಸೇವಕ ಕೆ.ಎನ್.ವೆಂಕಟ್ರಮಣ ಹೊಳ್ಳ, ಕರಂದಕ್ಕಾಡು ವೀರಹನುಮಾನ್ ಭಾಗಕ್ಕೆ ಸಾಮಾಜಿಕ ಕಾರ್ಯಕರ್ತ ಕೇಶವ, ಕೋಟೆಕಣಿ ರಾಮನಾಥ ಪ್ರದೇಶಕ್ಕೆ ಗುರುಪ್ರಸಾದ್ ಕೋಟೆಕಣಿ, ಕುರುಂಬಾ ಪ್ರದೇಶಕ್ಕೆ ಗಣೇಶ್ ಹಾಗೂ ಅಮೈ ಕೃಷ್ಣಾ ಮಂದಿರ ಪ್ರದೇಶಗಳಿಗೆ ಹರೀಶ್ ಅಮೈ ಅವರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿ.ಎಚ್.ಪಿ ನೇತಾರ ಕಮಲೇಶ್ ಕೇಳುಗುಡ್ಡೆ, ಜಯಂತ್ ಅಣಂಗೂರು, ಸಿ.ವಿ. ಪೆÇದುವಾಳ್, ರಮೇಶ್. ಪಿ, ರಾಮಕೃಷ್ಣ ಹೊಳ್ಳ, ಕಿಶೋರ್ ಕುಮಾರ್, ರವಿ ಕೇಸರಿ, ಜಲಜಾಕ್ಷಿ ಟೀಚರ್, ಉಮಾ ಕಡಪ್ಪುರ, ರಜನಿ, ಶ್ರೀಲತಾ ಟೀಚರ್, ಅಶ್ವಿನಿ ನಾಯ್ಕ್, ಕೆ.ಟಿನಾಯ್ಕ್, ಅಜಿತ್, ಅರುಣ್ ಅಮೈ ಉಪಸ್ಥಿತರಿದ್ದರು.