ಕಾಸರಗೋಡು : ನಗರದ ವಿವಿಧ ಹೊಟೇಲ್ ಮತ್ತು ಅಂಗಡಿಗಳಿಗೆ ನಗರಸಭಾ ಆರೋಗ್ಯ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ಹಳಸಿದ ಆಹಾರ ಪದಾರ್ಥಗಳು ಹಾಗೂ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ನಗರಸಭೆಯ ಆರೋಗ್ಯ ವಿಭಾಗದ ಸ್ಕ್ವಾಡ್‍ನಿಂದ ಹಳಸಿದ ಮತ್ತು ಸೇವನೆಗೆ ಯೋಗ್ಯಕರವಲ್ಲದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿವಿಧ ಅಂಗಡಿಗಳಿಂದ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಐದು ಹೋಟೆಲ್‍ಗಳಿಂದ ಹಳಸಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಗ್ಯ ನಿರೀಕ್ಷಕರಾದ ಕೃಷ್ಣನ್, ಪ್ರೇಮನಾಥ್, ನಾರಾಯಣಿ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರಾದ ಆಶಾ, ಅಂಬಿಕಾ ತಪಾಸಣೆಯಲ್ಲಿ ಪಾಲ್ಗೊ0ಡಿದ್ದರು.