ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ದೇಗುಲದಲ್ಲಿ ಸಾವಿರಾರು ಮಂದಿಯ ಭಕ್ತಿಸಾಂದ್ರತೆಯ ಶರಣಘೋಷದೊಮದಿಗೆ ಈ ವರ್ಷದ ಮಂಡಲ ಪೂಜಾ ಮಹೋತ್ಸವ ಬುಧವಾರ ಸಂಪನ್ನಗೊಂಡಿತು. ಬೆಳಗ್ಗೆ 10.30 ಹಾಗೂ 11.30ರ ಮಧ್ಯೆ ಶ್ರೀ ಅಯ್ಯಪ್ಪ ಸ್ವಾಂಈಗೆ ಮಂಡಲ ಪೂಜೆ ನೆರವೇರಿತು.
ಬೆಳಗ್ಗೆ 3.30ಕೆಕ ಗಣಪತಿ ಹೋಮ, 3.30ರಿಂದ 7 ಹಾಗೂ 8ರಿಂದ 9ರ ವರೆಗೆ ತುಪ್ಪಾಭಿಷೇಕ ನೆರವೆರಿತು. 9ಗಣಟೆಗೆ 25ಕಲಶಾಭಿಷೇಕ ನಂತರ ಕಳಭಾಭಿಷೇಕ ನೆರವೇರಿತು. ಮಧ್ಯಾಹ್ನ 1ಗಂಟೆಗೆ ಗರ್ಭಗುಡಿ ಬಾಗಿಲು ಮುಚ್ಚಿದ ನಂತರ 3ಕ್ಕೆ ತೆರೆಯಲಾಯಿತು. ಸಂಜೆ 6.30ಕ್ಕೆ ದೀಪಾರಾಧನೆ ನಡೆಯಿತು. ರಾತ್ರಿ 9.30ಕ್ಕೆ ಅತ್ತಾಳಪೂಜೆ, 10.50ಕ್ಕೆ ಹರಿವರಾಸನಂ ಹಾಡಿನೊಂದಿಗೆ 11ಕ್ಕೆ ಗರ್ಭಗುಡಿ ಬಾಗಿಲು ಮುಚ್ಚಲಾಯಿತು. ಮಕರಸಂಕ್ರಮಣ ಮಹೋತ್ಸವಕ್ಕಾಗಿ ಡಿ. 30ರಂದು ಗರ್ಭಗುಡಿ ಬಾಗಿಲು ತೆರೆಯಲಾಗುವುದು.
ಮುಜರಾಯಿ ಖಾತೆ ಸಚಿವ ಕೆ. ರಾಧಾಕೃಷ್ಣನ್ ಬುಧವಾರ ಶ್ರೀದೇವರ ದರ್ಶನಪಡೆದರು. ಮಂಡಲಪೂಜಾ ಮಹೋತ್ಸವ ಸಂದರ್ಭ ಭಕ್ತಾದಿಗಳ ದಟ್ಟಣೆ ನಿಯಂತ್ರಣಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.