ಪೆರ್ಲ: ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅವರು ದುಬೈ ಕೆಎಂಸಿಸಿ ಎಣ್ಮಕಜೆ ಪಂಚಾಯಿತಿ ಸಮಿತಿಯ "ತುಳುನಾಡ ಮತ ಮೈತ್ರಿ" ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ದುಬೈ ಅಲ್ ರಶೀದಿಯಾ ಮಾಡರ್ನ್ ಬ್ರಿಟೀಷ್ ಸ್ಕೂಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು.
ನಾಡಿನಲ್ಲಿ ಮತ ಸೌಹಾರ್ದತೆಯ ಆಶಯಗಳನ್ನು ಎತ್ತಿ ಹಿಡಿದು, ಸಮಾಜದಲ್ಲಿ ಸೌಹಾರ್ದ ವಾತಾವರಣ ಸೃಷ್ಟಿಸಲು ಸೋಮಶೇಖರ್ ನೀಡಿದ ಕೊಡುಗೆಯನ್ನು ಪರಿಗಣಿಸಿ, ಮಾಜಿ ಸಚಿವ, ದೀರ್ಘಕಾಲ ಮಂಜೇಶ್ವರ ಶಾಸಕರಾಗಿದ್ದ ಚೆರ್ಕಳಂ ಅಬ್ದುಲ್ಲರ ಹೆಸರಿನಲ್ಲಿ ದುಬೈ ಕೆಎಂಸಿಸಿ ಎಣ್ಮಕಜೆ ಪಂಚಾಯಿತಿ ಸಮಿತಿ ಕೊಡ ಮಾಡುವ ಮತ ಮೈತ್ರಿ ಪುರಸ್ಕಾರಕ್ಕೆ ಸೋಮಶೇಖರ್ ಅವರನ್ನು ಪರಿಗಣಿಸಲಾಗಿತ್ತು ಪಂಚಾಯಿತಿ ಆಡಳಿತದಲ್ಲಿ ಅವರ ಕ್ರಿಯಾತ್ಮಕವಾದ ನಿಲುವು, ಸಹಕಾರ, ಶಿಕ್ಷಣ, ಸಾಮಾಜಿಕ ಸೇವಾರಂಗದಲ್ಲಿ ಗಮನಾರ್ಹವಾದ ಸೇವೆ ಹಾಗೂ ಚಟುವಟಿಕೆಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು
ರಾಜ್ಯಸಭೆ ಸದಸ್ಯ, ಕನ್ನಡ ಸಾಹಿತಿ ಜೆ.ಹನುಮಂತಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಮಣ್ಣಾರ್ಕಾಡ್ ಎನ್.ಶಂಸುದ್ದೀನ್, ಕೆ.ಎಂ.ಸಿ.ಸಿ.ಕೇಂದ್ರ ಸಮಿತಿ ಗೌರವಾಧ್ಯಕ್ಷ ಯಹ್ಯಾ ತಳಂಗರೆ, ಉದ್ಯಮಿ ಅಬ್ದುಲ್ಲಾ ಮಾದುಮೂಲೆ, ಸಾಮಾಜಿಕ ಮುಂದಾಳು ಆಯಿಷಾ ಎ.ಎ. ಪೆರ್ಲ, ವಕೀಲ ಇಬ್ರಾಹಿಂ ಪಳ್ಳಂಗೋಡು, ವಕೀಲ ಇಬ್ರಾಹಿಂ ಖಲೀಲ್,ಎಸ್.ಯು.ಅಬ್ದುಲ್ಲ , ಯೂಸುಫ್ ಶೇಣಿ, ಅಶ್ರಫ್ ಶೇಣಿ, ಹಸನ್ ಕುದ್ವ, ಮುಸ್ತಾಕ್ ಪೆರ್ಲ, ಹಸನ್ ಕುದ್ವ ಮತ್ತಿತರರು ಉಪಸ್ಥಿತರಿದ್ದರು.