ಪತ್ತನಂತಿಟ್ಟ: ಶಬರಿಮಲೆಯಲ್ಲಿ ಯಾತ್ರಾರ್ಥಿಗಳ ನೂಕುನುಗ್ಗಲು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ವಿಫಲವಾಗಿದೆ ಎಂದು ಅಯ್ಯಪ್ಪ ಭಕ್ತರು ಆರೋಪಿಸಿದ್ದಾರೆ.
16 ಗಂಟೆಗೂ ಹೆಚ್ಚು ಕಾಲ ಕುಡಿಯುವ ನೀರು, ಆಹಾರ ಸಿಗದೆ ಭಕ್ತರು ದರ್ಶನಕ್ಕಾಗಿ ಕಾಯಬೇಕಾಗಿದೆ. ವೈಕಂ, ಪೊಂಕುನ್ನಂ, ಕೊಟ್ಟಾಯಂ ಮತ್ತು ಪಾಲಾ ಮುಂತಾದ ಪ್ರದೇಶಗಳಲ್ಲಿ ಅಯ್ಯಪ್ಪ ಭಕ್ತರ ವಾಹನಗಳು ಮತ್ತು ಇತರ ವಾಹನಗಳನ್ನು ಪೋಲೀಸರು ತಡೆದಿದ್ದಾರೆ. ಇದರಿಂದ ಅಯ್ಯಪ್ಪ ಭಕ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿರುವರು.
ನಿನ್ನೆಯμÉ್ಟೀ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಶಬರಿಮಲೆಗೆ ಆಗಮಿಸಿದ್ದರು. ವಾಹನ ದಟ್ಟಣೆ ನಿಯಂತ್ರಿಸುವಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಿ ಭಾರಿ ವೈಫಲ್ಯ ಉಂಟಾಗಿದೆ ಎನ್ನುತ್ತಾರೆ ಹೊರ ರಾಜ್ಯಗಳ ಅಯ್ಯಪ್ಪ ಭಕ್ತರು. ನಿನ್ನೆ ರಾತ್ರಿಯಿಂದ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆಹಾರ, ನೀರು, ಮೂಲ ಸೌಕರ್ಯಗಳಿಲ್ಲದೆ ಮಕ್ಕಳು ಸೇರಿದಂತೆ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳ ಅಯ್ಯಪ್ಪ ಭಕ್ತರು ತಿರುಪತಿಯಲ್ಲಿನ ವ್ಯವಸ್ಥೆಗಳು ಕೂಡ ಇದಕ್ಕಿಂತ ಉತ್ತಮವಾಗಿವೆ ಎಂದು ಹೇಳಿರುವÀರು. ಸರ್ಕಾರದ ವ್ಯವಸ್ಥೆಗಳು ತುಂಬಾ ಕೆಟ್ಟದಾಗಿದೆ ಮತ್ತು ಇನ್ನು ಮುಂದೆ ಶಬರಿಮಲೆಗೆ ಬರುವುದಿಲ್ಲ ಎಮದು ಬಹಳಷ್ಟು ಅನ್ಯರಾಜ್ಯ ಭಕ್ತರು ತಿಳಿಸಿದ್ದಾರೆ.
ಟ್ರಾಫಿಕ್ ನಿಯಂತ್ರಿಸಲು ಮಾತ್ರ ಸಾಧ್ಯ ಎಂದು ದೇವಸ್ವ ಸಚಿವರು ಸ್ಪಷ್ಟಪಡಿಸಿದ್ದಾರೆ. ಆದರೆ ಅಯ್ಯಪ್ಪ ಭಕ್ತರ ವಾಹನಗಳಿಗೆ ಕುಡಿಯುವ ನೀರು, ಊಟ, ಮೂಲ ಕರ್ಮಗಳಿಗೆ ವ್ಯವಸ್ಥೆ ಇಲ್ಲದ ಸ್ಥಳಗಳಲ್ಲಿ ವಾಹನಗಳನ್ನು ಜಪ್ತಿ ಮಾಡುವ ಮೂಲಕ ಪರಿಸ್ಥಿತಿ ಬಿಗಡಾಯಿಸಿದೆ. ವಾಹನ ದಟ್ಟಣೆ ನಿಯಂತ್ರಿಸುವಲ್ಲಿ ಹಾಗೂ ಅಯ್ಯಪ್ಪ ಭಕ್ತರಿಗೆ ನೀರು, ಅನ್ನಸಂತರ್ಪಣೆ ಮಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಭಕ್ತರು ಹೇಳಿರುವÀರು.