ಶಬರಿಮಲೆ: ಮಂಡಲ ಅವಧಿಯಲ್ಲಿ ಯಾತ್ರಾರ್ಥಿಗಳ ಹರಿವು ಎಲ್ಲಾ ಲೆಕ್ಕಾಚಾರಗಳನ್ನೇ ಬುಡಮೇಲುಗೊಳಿಸಿದೆ. ಆಂಧ್ರ ಮತ್ತು ತಮಿಳುನಾಡಿನಿಂದ ಅಭೂತಪೂರ್ವ ಅಯ್ಯಪ್ಪ ಭಕ್ತರು ಆಗಮಿಸಿದ್ದಾರೆ.
ಇದರೊಂದಿಗೆ ಅರವಣ ಪ್ರಸಾದದ ಕೊರತೆ ಉಲ್ಬಣಿಸಿದೆ. ಅರವಣ ತಯಾರಿ ಮುಖ್ಯವಾಗಿ ವ್ಯಾಪಕ ಸಮಸ್ಯೆ ಸೃಷ್ಟಿದೆ.
ದೇವಸ್ವಂ ಅಧಿಕಾರಿಗಳು ಹೇಳುವ ಪ್ರಕಾರ ಕ್ಷೇತ್ರದಾದ್ಯಂತ ಅರವಣ ಬೆಲ್ಲದ ದಾಸ್ತಾನು ಇತ್ತು. ಆದರೆ ಯಾತ್ರಾರ್ಥಿಗಳ ಅನಿರೀಕ್ಷಿತ ನೂಕು ನುಗ್ಗಲಿನಿಂದಾಗಿ ಹೆಚ್ಚು ಅರವಣ ಪ್ರಸಾದ ಮಾರಾಟವಾದವು. ಅದರೊಂದಿಗೆ ಬೆಲ್ಲದ ಕೊರತೆ ಉಂಟಾಯಿತು.
ಶಬರಿಮಲೆಗೆ ಬೆಲ್ಲದ ಶಾಶ್ವತ ಪೂರೈಕೆದಾರರು ಮಹಾರಾಷ್ಟ್ರದ ಕಾರ್ಖಾನೆಗಳನ್ನು ಅವಲಂಬಿಸಿದ್ದಾರೆ. ಆದರೆ ಈಗ ಮಹಾರಾಷ್ಟ್ರದಲ್ಲಿ ಬೆಲ್ಲದ ಕ್ಷಾಮ ತೀವ್ರವಾಗಿದೆ. ಕಾರಣ ತೀವ್ರ ಕಬ್ಬಿನ ಬೆಳೆ ಕೊರತೆ. ಪ್ರಾಕೃತಿಕ ವಿಕೋಪ ಹಾಗೂ ಇತರೆ ಬೆಳೆಗಳತ್ತ ವಾಲುತ್ತಿರುವ ಕಾರಣ ಮಹಾರಾಷ್ಟ್ರದಲ್ಲಿ ಈ ಬಾರಿ ಕಬ್ಬು ಬೆಳೆಯಲ್ಲಿ ಶೇ.35 ರಷ್ಟು ಕಡಿತವಾಗಿದೆ ಎನ್ನಲಾಗಿದೆ. ಇದರೊಂದಿಗೆ ಗುತ್ತಿಗೆದಾರರು ಬೆಲ್ಲಕ್ಕೆ ಕೆಜಿಗೆ 42 ರೂ.ಗೆ ಬದಲಾಗಿ 47 ರೂ.ಬೆಲೆ ನಿಗದಿಪಡಿಸಿದ್ದಾರೆ. ಆದರೆ ಇಷ್ಟು ಮೊತ್ತ ನೀಡಿ ಖರೀದಿಸಲು ದೇವಸ್ವಂ ಮಂಡಳಿ ಸಿದ್ಧವಿರಲಿಲ್ಲ. ಬದಲಿಗೆ ಮುಕ್ತ ಮಾರುಕಟ್ಟೆಯಿಂದಲೇ ನೇರವಾಗಿ ಬೆಲ್ಲ ಖರೀದಿಸಲು ನಿರ್ಧರಿಸಿತು. ಆದರೆ ಸಾಕಷ್ಟು ಬೆಲ್ಲ ಸಂಗ್ರಹಿಸಲಾಗಲಿಲ್ಲ.ಅದಕ್ಕಾಗಿಯೇ ಅರವಣ ಪ್ರಸಾದ ವಿತರಣೆಗೆ ನಿರ್ಬಂಧ ಹೇರಲಾಗಿದೆ.