ಕುಂಬಳೆ: ವಿದ್ಯಾರ್ಥಿಗಳಲ್ಲಿ ಸಮಾಜ ಸೇವಾ ಮನೋಭಾವನೆ ಮೂಡಿಸುವ ನಿಟ್ಟಿನಲ್ಲಿ ಸಮಾಜ ಸೇವಾ ಯೋಜನೆಯ ನೇತೃತ್ವದಲ್ಲಿ ಜಿಎಸ್ ಬಿಎಸ್ ಕುಂಬಳೆ ಶಾಲೆಯಲ್ಲಿ ‘ಚಂಕಾಯಿ ವೀಡು’(ಸಂಗಾತಿ ಮನೆ) ಎಂಬ ಸಹವಾಸ ಶಿಬಿರ ನಡೆಸಲಾಯಿತು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್ ಶಿಬಿರವನ್ನು ಉದ್ಘಾಟಿಸಿದರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ ಮುಖ್ಯ ಅತಿಥಿಯಾಗಿದ್ದರು. ಪಿಟಿಎ ಅಧ್ಯಕ್ಷ ಬೆಂಜಮಿನ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ನಸೀಮಾ ಖಾಲಿದ್, ವಾರ್ಡ್ ಸದಸ್ಯೆ ಪ್ರೇಮಾವತಿ, ಎಸ್.ಎಂ.ಸಿ. ಅಧ್ಯಕ್ಷ ಕಾದರ್ ಉಳುವಾರ್, ಶಿಕ್ಷಕರಾದ ಕಮಾಲುದ್ದೀನ್, ಸುನೋಜ್, ಸತೀಶ್ ಕುಮಾರ್, ದೀಪಾ, ಹರೀಶ್ವರನ್, ಸುಪ್ರಿಯಾ ಮತ್ತಿತರರು ಮಾತನಾಡಿದರು. ಮುಖ್ಯಶಿಕ್ಷಕಿ ದೇವಕಿ ಸ್ವಾಗತಿಸಿ, ಸಂಯೋಜಕ ರಿಯಾಜ್ ಮಾಸ್ತರ್ ವಂದಿಸಿದರು.
ಟಿ.ಎಂ.ಮುಹಾಜಿರ್, ಕುಂಬಳೆ ಕಿರಿಯ ಆರೋಗ್ಯ ನಿರೀಕ್ಷಕ ಮುರಳೀಧರನ್, ಸರಿತಾ, ರೇμÁ್ಮ, ಮನಶಾಸ್ತ್ರಜ್ಞ ಇರ್ಫಾದ್ ಮಾಯಿಪ್ಪಾಡಿ, ವಿದ್ಯಾರ್ಥಿಗಳಾದ ಶ್ರೀನಂದನ್, ಆರುμï ಮೊದಲಾದವರು ವಿವಿಧ ಅವಧಿಗಳಲ್ಲಿ ತರಗತಿಗಳನ್ನು ತೆಗೆದುಕೊಂಡರು. ಶಿಬಿರದ ಅಂಗವಾಗಿ ಆರಿಕ್ಕಾಡಿ ಕೋಟೆಗೆ ಪ್ರವಾಸ ಹಾಗೂ ವಿದ್ಯಾರ್ಥಿಗಳಿಗೆ ಸೀಮೆಸುಣ್ಣ ಚಾಕ್ ತಯಾರಿ ತರಬೇತಿ ನಡೆಸಲಾಯಿತು. ಸಮಾಜ ಸೇವಾ ಯೋಜನೆಯ ನೇತೃತ್ವದಲ್ಲಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಯಿತು.