ಮಂಜೇಶ್ವರ: ಕಡಂಬಾರ್ ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘ ಇದರ ಭಜನಾ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ನೃತ್ಯ ವೈವಿಧ್ಯ ಹಾಗೂ ಕುಣಿತ ಭಜನಾ ಕಾರ್ಯಕ್ರಮ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಕಡಂಬಾರಿನಲ್ಲಿ ಮಕ್ಕಳ ನೃತ್ಯ ಭಜನೆಯೊಂದಿಗೆ ಭಾನುವಾರ ನಡೆಯಿತು. ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮಕ್ಕೆ ಹಿರಿಯರಾದ ಜಯಂತ ಶೆಟ್ಟಿ ಪ್ರಾರ್ಥನೆ ಹಾಡುವುದರೊಂದಿಗೆ ಚಾಲನೆ ನೀಡಿದರು. ಎಸ್.ಎನ್ ಕಡಂಬಾರು,ವಸಂತ ಭಟ್ ತೊಟ್ಟೆತ್ತೋಡಿ ಶುಭ ಹಾರೈಸಿದರು. ಸುಬ್ರಮಣ್ಯ ಭಟ್,ಲಕ್ಷ್ಮೀಶ ರಾವ್, ಶ್ರೀಕಾಂತ್ ಹಾಗೂ ವೇ.ಮೂ ಗಣೇಶ್ ನಾವಡ ಉಪಸ್ಥಿತರಿದ್ದರು.
ಭಜನಾ ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪ ಕುಣಿತ ಭಜನಾ ಸಂಘ ಮೀಯಪದವು,ಶ್ರೀ ಶಾಸ್ತಾ ಕುಣಿತ ಭಜನಾ ಸಂಘ ಕಡಂಬಾರು, ಶ್ರೀ ಮಹಾವಿಷ್ಣುಮೂರ್ತಿ ಕುಣಿತ ಭಜನಾ ಸಂಘ ಕಡಂಬಾರು ಹಾಗೂ ಶ್ರೀ ಪಾಂಡವಾಸ್ ಕುಣಿತ ಭಜನಾ ಸಂಘ ಕುಂಬ್ಳೆ ತಂಡದ ಸದಸ್ಯರು ಭಾಗವಹಿಸಿದರು. ನಂತರ ಮಕ್ಕಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಜರಗಿತು.ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ಲಕ್ಷ್ಮೀಶ ವಂದಿಸಿದರು. ರಘು ರಾವ್ ಹಾಗೂ ಬ್ರಿಜೇಶ್ ನಿರೂಪಿಸಿದರು.