ಕುಂಬಳೆ: ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ಸಮೀಪದ ತ್ವಾಹಾ ಮಸೀದಿ ಅಡಿಯಲ್ಲಿ ಮದ್ರಸತುಲ್ ಹಿದಾಯಕ್ಕೆ ನಿರ್ಮಿಸಿರುವ ನೂತನ ಕಟ್ಟಡದ ಉದ್ಘಾಟನೆ ಗುರುವಾರ ಸಂಜೆ ಅಸರ್ ನಮಾಝಿನ ಬಳಿಕ ನಡೆಯಲಿದೆ ಎಂದು ಪದಾಧಿಕಾರಿಗಳು ಕುಂಬಳೆಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಖ್ಯಾತ ಇಸ್ಲಾಮಿಕ್ ಬೋಧಕ ಸಿಂಸಾರುಲ್ ಹಕ್ ಹುದವಿ ಉದ್ಘಾಟಿಸುವರು. ಸೈಯದ್ ಕೆ.ಎಸ್. ಅಲಿ ತಂಙಳ್ ಕುಂಬೋಳ್ ಪ್ರಾರ್ಥನೆ ನಡೆಸುವರು. ತ್ವಾಹಾ ಮಸೀದಿ ಸಮಿತಿ ಅಧ್ಯಕ್ಷ ಎಂ.ಇಜುದ್ದೀನ್ ಅಧ್ಯಕ್ಷತೆ ವಹಿಸುವರು.
ಮಗ್ರಿಬ್ ನಮಾಝಿನ ಬಳಿಕ ನಡೆಯುವ ಮಜ್ಲಿಸುನ್ನೂರ್ ಸದಸ್ ಗೆ ಎನ್.ಪಿ.ಎಂ ಶರಪುದ್ದೀನ್ ಅಲ್ ಹಾದಿ ರಬ್ಬಾನಿ ತಂಙಳ್ ನೇತೃತ್ವ ವಹಿಸುವರು. ಮುಹಮ್ಮದ್ ಫವಾಝ್ ಅನ್ಸಾರಿ ಅಲ್-ನಿಝಾಮಿ ಶುಕ್ರವಾರ ರಾತ್ರಿ ಉಪನ್ಯಾಸ ನೀಡಲಿದ್ದಾರೆ. ಸೈಯದ್ ಮುನೀರುಲ್ ಅಹ್ದಲ್ ತಂಙಳ್ ಪ್ರಾರ್ಥನೆ ನಡೆಸುವರು. ರಾತ್ರಿ 9 ಕ್ಕೆ ಖ್ಯಾತ ಇಸ್ಲಾಮಿಕ್ ಕಥೆಗಾರ ಕಾತಿಕನ್ ಜುಬೇರ್ ಮಾಸ್ತರ್ ನೇತೃತ್ವದಲ್ಲಿ ಇಸ್ಲಾಮಿಕ್ ಕಥಾ ಉಪನ್ಯಾಸ ನಡೆಯಲಿದೆ. ಶನಿವಾರ ಸಮಾರೋಪ ಸಮಾರಂಭವನ್ನು ಉಮ್ಮರುಲ್ ಹುದವಿ ಉದ್ಘಾಟಿಸುವರು. ಸೈಯದ್ ಹಾದಿ ತಂಙಳ್ ಪ್ರಾರ್ಥನೆಗೈಯುವರು. ನವಾಜ್ ಮನ್ನಾನಿ ಮುಖ್ಯ ಭಾಷಣ ಮಾಡುವರು. ಸ್ವಾಗತ ಸಮಿತಿ ಅಧ್ಯಕ್ಷ ಹನೀಫ್ ಕುಂಟಂಗೇರಡ್ಕ ಅಧ್ಯಕ್ಷತೆ ವಹಿಸುವರು.
ಸುದ್ದಿಗೋಷ್ಠಿಯಲ್ಲಿ ತ್ವಾಹ ಮಸೀದಿ ಸಮಿತಿ ಅಧ್ಯಕ್ಷ ಎಂ.ಇಸುದ್ದೀನ್, ಪ್ರಧಾನ ಕಾರ್ಯದರ್ಶಿ ಎನ್. ಅಬ್ದುಲ್ಲಾ ತಾಜ್, ಕೋಶಾಧಿಕಾರಿ ಮುಹಮ್ಮದಲಿ ಕುಂಟಂಗೇರಡ್ಕ, ಸ್ವಾಗತ ಸಮಿತಿ ಸಂಚಾಲಕ ಕೆ.ಎಂ. ಅಬ್ಬಾಸ್, ಅಧ್ಯಕ್ಷ ಹನೀಫ್ ಕುಂಟಂಗೇರಡ್ಕ ಉಪಸ್ಥಿತರಿದ್ದರು.