ನವದೆಹಲಿ: ಭ್ರಷ್ಟಾಚಾರ ಕುರಿತಂತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, 'ಜನರಿಂದ ಲೂಟಿ ಮಾಡಿರುವ ಪ್ರತಿ ಪೈಸೆಯನ್ನು ಅವರು ಹಿಂದಿರುಗಿಸಬೇಕು. ಇದು, ಮೋದಿ ಗ್ಯಾರಂಟಿ' ಎಂದಿದ್ದಾರೆ.
ನವದೆಹಲಿ: ಭ್ರಷ್ಟಾಚಾರ ಕುರಿತಂತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, 'ಜನರಿಂದ ಲೂಟಿ ಮಾಡಿರುವ ಪ್ರತಿ ಪೈಸೆಯನ್ನು ಅವರು ಹಿಂದಿರುಗಿಸಬೇಕು. ಇದು, ಮೋದಿ ಗ್ಯಾರಂಟಿ' ಎಂದಿದ್ದಾರೆ.
'ಎಕ್ಸ್' ಜಾಲತಾಣದಲ್ಲಿ ಈ ಬಗ್ಗೆ ಅವರು ಪೋಸ್ಟ್ ಮಾಡಿದ್ದಾರೆ.
'ಎತ್ತರಕ್ಕೆ ಜೋಡಿಸಿಟ್ಟಿರುವ ಕರೆನ್ಸಿ ನೋಟುಗಳನ್ನು ದೇಶದ ಜನರು ಒಮ್ಮೆ ನೋಡಬೇಕು. ನಂತರ ಪ್ರಾಮಾಣಿಕತೆ ಕುರಿತು ಆವರ ಪಕ್ಷದವರು ಮಾತನಾಡುವುದನ್ನು ಕೇಳಬೇಕು' ಎಂದು ಮೋದಿ ಹೇಳಿದರು. ಮಾಧ್ಯಮ ವರದಿ ಜೊತೆಗೆ, ಆಲ್ಮೇರಾಗಳಲ್ಲಿ ನೋಟುಗಳನ್ನು ಜೋಡಿಸಿಟ್ಟಿರುವ ಚಿತ್ರವು ಪ್ರಕಟವಾಗಿದೆ.