ಕಾಸರಗೊಡು: ಕೆ.ಪಿ.ಜುಬೇರ್ ಸ್ಮಾರಕ ಸಾರ್ವಜನಿಕ ಸೇವಾ ಕೇಂದ್ರದ ಲೋಕಾರ್ಪಣೆ ಸಮಾರಂಭ ಡಿ.18ರಂದು ನಡೆಯಲಿದ್ದು, ಸಂಘಟನೆ ಅಧ್ಯಕ್ಷ ಮುನೀರ್ ಕೆ.ಪಿ ಲೋಕಾರ್ಫಣೆಗೈಯುವರು. ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ವಿ.ವಿ.ರಮೇಶನ್ ಲೋಗೋ ಬಿಡುಗಡೆಗೊಳಿಸುವರು ಎಂದು ಕೆ.ಪಿ ಜುಬೇರ್ ಸ್ಮಾರಕ ಪ್ರತಿನಿಧಿ ಮುನೀರ್ ಕೆ.ಪಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ದತ್ತಿ ನಿಧಿಯನ್ನು ಸಿಪಿಐ(ಎಂ) ಕುಂಬಳೆ ಏರಿಯಾ ಕಾರ್ಯದರ್ಶಿ ಸಿ.ಎ.ಜುಬೇರ್ ನೆರವೇರಿಸಲಿದ್ದಾರೆ. ಲೋಕಾರ್ಪಣಾ ಸಮಾರಂಭದ ಅಂಗವಾಗಿ ಅನಾಥ ಮಕ್ಕಳಿಗೆ ಮಾಸಿಕ ಅಧ್ಯಯನ ಸಹಾಯ ನಿಧಿ, ಬಡ ಕುಟುಂಬಗಳಿಗೆ ಮಾಸಿಕ ಪಿಂಚಣಿ ನಿಧಿ, ಮೂತ್ರಪಿಂಡ ರೋಗಿಗಳಿಗೆ ಮಾಸಿಕ ಡಯಾಲಿಸಿಸ್ ನಿಧಿ ಆಯೋಜಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ರಝಾಕ್ ಕೋಟೇಲ್, ಅಸ್ಲು ಇಮಾನ್ಸ್, ಸಿದ್ದೀಕ್ ಮೋಕ್, ಆರಿಕ್ಕಾಡಿ ಶಾಖಾ ಕಾರ್ಯದರ್ಶಿ ಎನ್.ಕೆ.ಅಮ್ಮಿ, ಸರ್ಫರಾಜ್ ಭಾಗವಹಿಸಿದ್ದರು.