ತಿರುವನಂತಪುರಂ: ನಟಿ, ಸಂಗೀತಗಾಯಕಿ ಆರ್ ಸುಬ್ಬಲಕ್ಷ್ಮಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ತಿರುವನಂತಪುರಂನ ಜಿಜಿ ಆಸ್ಪತ್ರೆಯಲ್ಲಿ ನಿನ್ನೆ ಕೊನೆಯುಸಿರೆಳೆದಿದ್ದಾರೆ.
ಸುಬ್ಬಲಕ್ಷ್ಮಿ ಕರ್ನಾಟಕ ಸಂಗೀತ ಗಾಯಕಿ ಮತ್ತು ನೃತ್ಯಗಾರ್ತಿ. ಸುಬ್ಬಲಕ್ಷ್ಮಿ ಸಿನಿಮಾ ಧಾರಾವಾಹಿ ನಟಿ ತಾರಾ ಕಲ್ಯಾಣ್ ಅವರ ತಾಯಿಯೂ ಹೌದು.
27 ವರ್ಷಗಳ ಕಾಲ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡಿದ ಸುಬ್ಬಲಕ್ಷ್ಮಿ ಅವರು ಮಲಯಾಳಂ ಚಿತ್ರಗಳಲ್ಲಿ ಅಜ್ಜಿ ಪಾತ್ರಗಳನ್ನು ನಿರ್ವಹಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಡಬ್ಬಿಂಗ್ ಕಲಾವಿದೆಯಾಗಿ ಮತ್ತು ಹಿನ್ನೆಲೆ ಗಾಯಕರಾಗಿ ಕೆಲಸ ಮಾಡಿದ್ದಾರೆ. ಹಲವು ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.
ಕಲ್ಯಾಣ ರಾಮನ್ ಮತ್ತು ನಂದನಂ ಚಿತ್ರಗಳಲ್ಲಿನ ಸುಬ್ಬಲಕ್ಷ್ಮಿ ಪಾತ್ರಗಳು ಅವರನ್ನು ಜನಪ್ರಿಯಗೊಳಿಸಿದವು. ಗ್ಲುಗಮ್, ಸಿಐಡಿ ಮೂಸಾ, ಪಾಂಡಿಪ್ಪಡ ಮತ್ತು ಇನ್ನೂ ಅನೇಕ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ನಗಿಸಿದ ನಟಿ. ಸೌಂಡ್ ಥೋಮ, ಕೂದರ, ಪ್ರಣಯ ಕಥಾ, ಸೀತಾ ಕಲ್ಯಾಣಂ, ಒನ್, ರಾಣಿ ಪದ್ಮಿನಿ ಮುಂತಾದ ಸುಮಾರು 70 ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದರು. ಹಿಂದಿ, ತೆಲುಗು, ಕನ್ನಡ, ತಮಿಳು, ಸಂಸ್ಕøತ ಮತ್ತು ಇಂಗ್ಲಿμï ಮುಂತಾದ ಭಾμÉಗಳಲ್ಲಿಯೂ ನಟಿಸಿದ್ದಾರೆ.
ಸುಬ್ಬಲಕ್ಷ್ಮಿಯವರ ಪತಿ ದಿ. ಕಲ್ಯಾಣಕೃಷ್ಣನ್. ದಂಪತಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರರನ್ನು ಅಗಲಿದ್ದಾರೆ. ತಾರಾ ಕಲ್ಯಾಣ್ ಕಿರಿಯ ಮಗಳು.