ಮುಳ್ಳೇರಿಯ: ವಾರ್ಷಿಕ ಮಹಾಸಭೆಯು ಸಂಘಟನೆಯು ನಡೆದ ಹಾದಿಯ ಸಿಂಹಾವಲೋಕನವಾಗಿದೆ. ಸಂಘಟನೆಯ ಕ್ರೀಡೋತ್ಸವ ಹಾಗೂ ಸಾಂಸ್ಕøತಿಕೋತ್ಸವವು ಸಮುದಾಯದ ಜನರ ಸಂಪರ್ಕ ಸೇತುವಾಗಿದೆ. ಸಂಘಟನೆಗಳಿಲ್ಲದಿದ್ದರೆ ಯಾವುದೇ ಸಮುದಾಯಕ್ಕೂ ಅಸ್ತಿತ್ವ ಉಳಿಸಿಕೊಳ್ಳಲು ಕಷ್ಟ ಎಂದು ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಕಾರ್ಯದರ್ಶಿ ಡಾ. ಸೀತಾರಾಮ ಕಡಮಣ್ಣಾಯ ಹೇಳಿದರು.
ಅವರು ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆತಿಥ್ಯದಲ್ಲಿ ಮುಳ್ಳೇರಿಯ ಗಣೇಶ ಮಂದಿರದಲ್ಲಿ ಭಾನುವಾರ ನಡೆದ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘಟನೆಯ ಜಿಲ್ಲಾಧ್ಯಕ್ಷ ಟಿ ಕೆ. ಮಂಜುನಾಥ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಸಮಿತಿಯ ಖಜಾಂಜಿ ಅಡೂರು ಶ್ರೀಪ್ರಕಾಶ ಪಾಂಙಣ್ಣಾಯ, ಯುವಶಕ್ತಿ ಅಧ್ಯಕ್ಷ ಪ್ರದೀಪ ಕುಮಾರ ಅಡಿಗ, ಕಾರ್ಯದರ್ಶಿ ಚೇತನ್ ಕುಮಾರ, ಕಾಸರಗೋಡು ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಚಕ್ರಪಾಣಿ ದೇವಪೂಜಿತ್ತಾಯ, ಮಂಜೇಶ್ವರ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಅನಂತರಾಮ ನಲ್ಲೂರಾಯ, ಕಾಂಞಂಗಾಡ್ ಶಿವಳ್ಳಿ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಅರುಣ್ ಕುಮಾರ ಶರ್ಮ, ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಡಾ. ರವಿಪ್ರಸಾದ್, ಏತಡ್ಕ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಎಂ ಸುಬ್ರಾಯ ಬಳ್ಳುಳ್ಳಾಯ, ಸಂಘಟನೆಯ ರಕ್ಷಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಸಂಘಟನೆಯ ಬಲವರ್ಧನೆಯ ಕುರಿತು ಸುಮಂಗಲಾ ತಂತ್ರಿ ಕಾಸರಗೋಡು, ಪ್ರಮೀಳಾ ಮೋಹನ ಸರಳಾಯ ಅಡೂರು ಮಾತನಾಡಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುಮನ ಅಡಿಗ ಸ್ವಾಗತಿಸಿದರು. ಸೀಮಾ ಬಳ್ಳುಳ್ಳಾಯ ವಂದಿಸಿದರು. ಪ್ರೀತಂ ಕೇಕುಣ್ಣಾಯ ಅಲಂತಡ್ಕ ನಿರೂಪಿಸಿದರು.