HEALTH TIPS

ಜ್ಞಾನವಾಪಿ: ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

                 ಪ್ರಯಾಗರಾಜ್‌: ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಹಿಂದೂ ದೇವಾಲಯವನ್ನು ಪುನರ್‌ ಸ್ಥಾಪಿಸಬೇಕು ಎಂದು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣಾಯೋಗ್ಯತೆಯನ್ನು ಪ್ರಶ್ನಿಸಿ ಅಂಜುಮನ್‌ ಇಂತೆಝಾಮಿಯಾ ಮಸೀದಿ ಸಮಿತಿ (ಎಐಎಂಸಿ) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಅಲಹಾಬಾದ್‌ ಹೈಕೋರ್ಟ್‌ ಮಂಗಳವಾರ ಮುಂದೂಡಿತು.

             ವಿಚಾರಣೆಗಾಗಿ ಈ ಅರ್ಜಿಯನ್ನು ನ್ಯಾಯಮೂರ್ತಿ ರೋಹಿತ್‌ ರಂಜನ್‌ ಅಗರ್ವಾಲ್‌ ಅವರೆದುರು ಪಟ್ಟಿ ಮಾಡಲಾಗಿತ್ತು. ವಿಚಾರಣೆ ಮುಂದೂಡಿದ ಅಗರ್ವಾಲ್‌ ಅವರು, ಅದನ್ನು ಡಿಸೆಂಬರ್‌ 7ಕ್ಕೆ ನಿಗದಿಪಡಿಸಿದರು.

               ಇದಕ್ಕೂ ಮೊದಲು, ಈ ಮೊಕದ್ದಮೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರೀತಿಂಕರ್‌ ದಿವಾಕರ್‌ ಅವರ ಪೀಠದೆದುರು ಪಟ್ಟಿಮಾಡಲಾಗಿತ್ತು. ನವೆಂಬರ್‌ 22ರಂದು ದಿವಾಕರ್‌ ಅವರು ನಿವೃತ್ತರಾದ ಕಾರಣ ಅದನ್ನು ಅಗರ್ವಾಲ್‌ ಅವರ ಎದುರು ಪಟ್ಟಿಮಾಡಲಾಯಿತು.

                'ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲು ಪುರಾತತ್ವ ಇಲಾಖೆಗೆ ವಾರಾಣಸಿ ನ್ಯಾಯಾಲಯ ನೀಡಿರುವ ನಿರ್ದೇಶನವನ್ನೂ ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ' ಎಂದು ಎಐಎಂಸಿ ಪರ ವಕೀಲರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries