ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಳವಡಿಸಲಿರುವ ಧ್ವಜ ತಯಾರಿಗಿರುವ ಪವಿತ್ರ ಮರವನ್ನು ಮೆರವಣಿಗೆ ಮೂಲಕ ಭಕ್ತಿ ಸಂಭ್ರಮದಿಂದ ದೇವಸ್ಥಾನಕ್ಕೆ ತಲುಪಿಸಲಾಯಿತು.
ಈಶ್ವರಮಂಗಲ ಪುಂಡಿಕಾಯಿ ಚರವು ನಿವಾಸಿ ಪ್ರಶಾಂತ್ ಕೃಷ್ಣ ಭಟ್ ಎಂಬವರ ಸ್ಥಳದಿಂದ ಮರವನ್ನು ಕಡಿದು ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ತರಲಾಗಿದೆ. ಮೆರವಣಿಗೆ ಸಾಗಿದ ಸ್ಥಳದಲ್ಲಿ ವಿವಿಧ ಸಂಘ ಸಂಸ್ಥೆ ಗಳು, ವ್ಯಕ್ತಿಗಳಿಂದ ಭವ್ಯ ಸ್ವಾಗತ ನೀಡಲಾಯಿತು. ಸುಳ್ಯಪದವು ಕೊರಗತನಿಯ ಶಬರಿನಗರ, ಸಬ್ರಾಕಜೆ ಹಲೋ ಫ್ರೆಂಡ್ಸ್, ಓಂ ಶಿವ ನೆಟ್ಟಣಿಗೆ, ವಿಷ್ಣುಮೂರ್ತಿ ಧೂಮಾವತಿ ಭಜನಾ ಸಂಘ ಕಿಂನ್ನಿಗಾರು, ಶಾಸ್ತರ ಭಜನಾ ಮಂದಿರ ಗಿರಿಪುರ ಬೀಜದಕಟ್ಟೆ, ದುರ್ಗಾಪರಮೇಶ್ವರಿ ಭಜನಾ ಸಂಘ ಏತಡ್ಕ, ತಂಬಾ ಐದು ಮನೆಯವರು, ಪಾಲೆಕಾರ್ ಭಕ್ತ ವೃಂದ, ಪೆÇೀಡಿಪ್ಪಳ್ಳ, ಚೀರುಂಬಾ ಭಗವತೀ ಕ್ಷೇತ್ರ, ಆಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ, ಅಮ್ಮ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್, ಶ್ರೀ ಧರ್ಮ ಶಾಸ್ತ ಭಜನಾ ಮಂದಿರ ಕುರುಮುಜ್ಜಿ ಕಟ್ಟೆ, ಮಹಿಷಮರ್ದಿನೀ ಇಂಜಿನಿಯರಿಂಗ್ ವಕ್ರ್ಸ್ ನಾರಂಪಾಡಿ, ನಾರಂಪಾಡಿ ಗುತ್ತು ದೈವಸ್ಥಾನ ಸಮಿತಿ, ಶಿವಗಿರಿ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ ನಾರಂಪಾಡಿ, ಪಾಂಚ ಜನ್ಯ ಭಜನಾ ಸಂಘ ಜಯನಗರ, ಶ್ರೀಮಾತಾ ನೃತ್ಯ ಸಂಘ ಮಾರ್ಪನಡ್ಕ, ದ್ರುವ ಶಕ್ತಿ ನಾಸಿಕ್ ಬ್ಯಾಂಡ್ ಮೇಳ ಜಯನಗರ, ತತ್ವಮಸಿ ಸಿಂಗಾರಿ ಮೇಳ ಮಾವಿನಕಟ್ಟೆ, ಆಯರ್ಂಭಾ ಮಾತೃ ಮಂಡಳಿ ಸಹಿತ ವಿವಿಧ ಸಂಘ ಸಂಸ್ಥೆಗಳು ಧ್ವಜಸ್ತಂಭ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪಂಚ ವಾದ್ಯ, ಚೆಂಡೆಮೇಳಗಳ ಮೆರವಣಿಗೆಯೊಂದಿಗೆ ಶ್ರೀ ಕ್ಷೇತ್ರಕ್ಕೆ ತಲುಪಿತು.