ಬದಿಯಡ್ಕ: ಉಬ್ರಂಗಳ ಬಡಗು ಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ವಾರ್ಷಿಕ ಪಾಟು ಉತ್ಸವ, ಶ್ರೀ ಭೂತ ಬಲಿ ಉತ್ಸವ ಹಾಗೂ ಧೂಮಾವತಿ ದೈವದ ಕೋಲವು ಸಂಪನ್ನಗೊಂಡಿತು. ಊರಪರವೂರ ಸಹಸ್ರಾರು ಭಗವದ್ಭಕ್ತರು, ಅಯ್ಯಪ್ಪ ವ್ರತಧಾರಿಗಳು ಉತ್ಸವದ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿತ್ತು. ಪಾಟು ಉತ್ಸವದ ನಂತರ ಶ್ರೀ ದೇವರ ಬಲಿ ಉತ್ಸವ, ಬೆಡಿಸೇವೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನಾಟ್ಯಗುರು ಮಂಜೇಶ್ವರ ಬಾಲಕೃಷ್ಣ ಮಾಸ್ತರ್ ಇವರ ಶಿಷ್ಯರಿಂದ ನೃತ್ಯ ವೈವಿಧ್ಯ ನಡೆಯಿತು. ದರ್ಶನಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಮಂತ್ರಾಕ್ಷತೆ, ಶ್ರೀ ಧೂಮಾವತೀ ದೈವದ ಕೋಲ, ವಾದ್ಯಘೋಷಗಳೊಂದಿಗೆ ಶ್ರೀ ಕ್ಷೇತ್ರಕ್ಕೆ ದೈವದ ಭೇಟಿ, ಗುಳಿಗನ ಕೋಲ ನಡೆಯಿತು.