ತಿರುವನಂತಪುರಂ: ಮಲ್ಲಿಗೆಯ ಬೆಲೆ ದಿಢೀರ್ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಕೆಜಿಗೆ 2,700 ರೂ.ವರೆಗೆ ವಿಕ್ರಯವಾಗುತ್ತಿದೆ. ಒಂದು ಮೀಟರ್ ಮಲ್ಲಿಗೆಗೆ 750 ರೂ.ವರೆಗಿದೆ.
ಎರಡು ತಿಂಗಳ ಹಿಂದೆ 500ರಿಂದ 700 ರೂ.ಬೆಲೆ ಇತ್ತು. ನಂತರ ಬೆಲೆ 1,000ಕ್ಕೆ ಜಿಗಿದಿತ್ತು. 2500 ರೂಪಾಯಿ ಬೆಲೆಯ ಹೂವು 2700 ರೂಪಾಯಿಗೆ ಮಾರಾಟವಾಗುತ್ತಿದೆ. ಮಲ್ಲಿಗೆ ಬೆ|ಳೆ ಕುಸಿತ, ಬೇಡಿಕೆ ಹೆಚ್ಚಳದಿಂದ ಬೆಲೆಯೂ ಹೆಚ್ಚುತ್ತಿದೆ.