ಕಾಸರಗೋಡು: ಭಾರತದ ಪ್ರಜಾಪ್ರಭುತ್ವದ ದೇಗುಲವಾದ ಭಾರತೀಯ ಸಂಸತ್ತಿನೊಳಗೆ ನಡೆದ ಹಿಂಸಾಚಾರಕ್ಕೆ ಪ್ರತಿಕ್ರಿಯಿಸಿದ 142 ಪ್ರತಿಪಕ್ಷ ಸಂಸದರನ್ನು ಉಭಯ ಸದನಗಳಿಂದ ಅಮಾನತುಗೊಳಿಸಿದ ನರೇಂದ್ರ ಮೋದಿ ಸರ್ಕಾರದ ಧೋರಣೆ ವಿರುದ್ಧ ಜನತೆ ಒಗ್ಗಟ್ಟಾಗಿ ನಿಲ್ಲಬೇಕೆಂದು ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ. ಅವರು ಕೆಪಿಸಿಸಿ ಆಹ್ವಾನದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಡಿಸಿಸಿ ಕಚೇರಿಯ ಗಾಂಧಿ ಪ್ರತಿಮೆ ಎದುರು ನಡೆದ 'ಪ್ರಜಾಪ್ರಭುತ್ವ ರಕ್ಷಣಾ ಸಮಾವೇಶ' ಉದ್ಘಾಟಿಸಿ ಮಾತನಾಡಿದರು.
ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಕೀಲ ಸನ್ನಿ ಸೆಬಾಸ್ಟಿಯನ್, ಮಾಜಿ ಡಿಸಿಸಿ ಅಧ್ಯಕ್ಷರಾದ ಕೆ.ಪಿ.ಕುಞÂಕಣ್ಣನ್, ಹಕೀಂ ಕುನ್ನಿಲ್, ಕೆಪಿಸಿಸಿ ಕಾರ್ಯದರ್ಶಿ ವಕೀಲ ಸೈಮನ್ ಅಲೆಕ್ಸ್, ಮುಖಂಡರಾದ ಕೆ.ನೀಲಕಂಠನ್, ಪಿ.ಎ.ಅಶ್ರಫಲಿ, ಕರಿಂಬಿಲ್ ಕೃಷ್ಣನ್, ವಿನೋದ್ ಕುಮಾರ್ ಪಲ್ಳಿಯಿಲ್, ಎಂ.ಸಿ.ಪ್ರಭಾಕರನ್, ಎಂ. ಕುಞಂಬು ನಂಬಿಯಾರ್, ಪಿ.ವಿ.ಸುರೇಶ್, ಸುಂದರ ಆರಿಕ್ಕಾಡಿ, ವಿ.ಆರ್.ವಿದ್ಯಾಸಾಗರ್, ಕೆ.ವಿ.ಸುಧಾಕರನ್, ಹರೀಶ್.ಪಿ.ನಾಯರ್, ಕೆ.ಪಿ.ಪ್ರಕಾಶನ್, ಮಾಮನಿ ವಿಜಯನ್, ಧನ್ಯಾ ಸುರೇಶ್, ಕೆ.ವಿ.ವಿಜಯನ್, ಮಡಿಯನ್ ಉಣ್ಣಿಕೃಷ್ಣನ್, ಜಾಯ್ ಜೋಸೆಫ್, ಉಮೇಶನ್ ಬೇಳೂರು, ಮಧುಸೂದನ್ ಬಾಳೂರು ಕೆ.ವಿ.ಭಕ್ತವತ್ಸಲನ್, ಎಂ.ರಾಜೀವನ್ ಉಪಸ್ಥಿತರಿದ್ದರು.