ಮುಳ್ಳೇರಿಯ: ಮವ್ವಾರು ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದ ನಡೆಯುತ್ತಿರುವ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ವಸಂತಕುಮಾರ್ ಗೋಸಾಡ ಇವರ ನೇತೃತ್ವದ ವೈಷ್ಣವ್ ವಸಂತ್ ತಂಡದವರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮ ಗುರುವಾರ ರಾತ್ರಿ ಜರಗಿತು.
ಖ್ಯಾತ ಸಂಗೀತ ವಿದ್ವಾಂಸರಾದ ರಾಷ್ಟ್ರಪ್ರಶಸ್ತಿ ವಿಜೇತ ವೆಳ್ಳಿಕೋತ್ ವಿಷ್ಣು ಭಟ್, ವಸಂತಕುಮಾರ್ ಗೋಸಾಡ, ಭಾಗ್ಯಶ್ರೀ ಮುಳ್ಳೇರಿಯ, ಚಿನ್ಮಯಿ ವೇಣೂರು, ಶಮಾ ವಳಕುಂಜ ಇವರು ಗಾಯನವನ್ನು ನಡೆಸಿಕೊಟ್ಟರು. ಹಿಮ್ಮೇಳದಲ್ಲಿ ವಿದ್ವಾನ್ ಪುರುμÉೂೀತ್ತಮ ಕೊಪ್ಪಲ್, ಗಿರೀಶ್ , ಪ್ರಭಾಕರನ್ ಮಲ್ಲ ಸಹಕರಿಸಿದರು. ಪಾಂಚಜನ್ಯ ಮಿತ್ರ ವೃಂದ ಮವ್ವಾರು ಇವರ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನೆರವೇರಿತು.