ಕಾಸರಗೊಡು: ಮೀನುಗಾರಿಕೆ ಇಲಾಖೆಯು ಸಾಂಪ್ರದಾಯಿಕ ಮೀನುಗಾರಿಕಾ ದೋಣಿಗಳಿಗೆ ವಿಮಾ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸುತ್ತಿದೆ. ದೋಣಿ ಮಾಲೀಕರು ಮೀನುಗಾರರ ಕಲ್ಯಾಣನಿಧಿ ಮಂಡಳಿಯ ಸದಸ್ಯರಾಗಿರಬೇಕು ಮತ್ತು ದೋಣಿಗಳ ನೋಂದಣಿ ಮತ್ತು ಪರವಾನಗಿ ಹೊಂದಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳು ಪ್ರೀಮಿಯಂ ಮೊತ್ತದ ಶೇಕಡಾ ಹತ್ತರಷ್ಟು ಹಣವನ್ನು ಫಲಾನುಭವಿಯ ಪಾಲಾಗಿ ಪಾವತಿಸಬೇಕು. ಅರ್ಜಿ ನಮೂನೆಯನ್ನು ಮೀನುಗಾರಿಕಾ ಉಪನಿರ್ದೇಶಕರ ಕಛೇರಿಯಿಂದ ಮತ್ತು ಕುಂಬಳೆ, ಕಾಂಞಂಗಾಡು, ಕಾಸರಗೋಡು, ಅಥವಾ ತೃಕರಿಪೂರ್ ಮತ್ಸ್ಯಭವನಗಳಿಂದ ಪಡೆಯಬಹುದು. ಡಿಸೆಂಬರ್ 31ರಂದು ಸಂಜೆ 5ರ ವರೆಗೆ ಸ್ವೀಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (0467 2202537) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.