ನವದೆಹಲಿ: ಯಾವುದೇ ರಾಜ್ಯಗಳ ಜಿಎಸ್‌ಟಿ ಬಾಕಿ ಬಾಕಿ ಉಳಿದಿಲ್ಲ. ಕೆಲವು ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಹಣ ಬಿಡುಗಡೆಗೆ ಎಜಿಯ ದೃಢೀಕೃತ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.
ರಾಜ್ಯ ಸಭೆಯಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರದಿಂದ ಜಿಎಸ್‌ಟಿ ಬಾಕಿ ಉಳಿದಿದೆ ಎಂಬ ಹೇಳಿಕೆ ಸರಿಯಲ್ಲ. ರಾಜ್ಯಗಳು ಎಜಿ ವರದಿ ಸಲ್ಲಿಸದೇ ಇರುವುದು ತಪ್ಪು ಎಂದರು.
"ಎಜಿಯ (ಅಕೌಂಟೆಂಟ್ ಜನರಲ್) ಪ್ರಮಾಣೀಕರಣ ಕಡ್ಡಾಯವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅದನ್ನು ಕೇಂದ್ರ ಸರ್ಕಾರಕ್ಕೆ ಸಲಿಸದಿದ್ದರೆ ಜಿಎಸ್ ಟಿ ಬಾಕಿ ಬಿಡುಗಡೆ ಸಾಧ್ಯವಿಲ್ಲ. ಕೆಲವು ರಾಜ್ಯಗಳು ಎಜಿ ಪ್ರಮಾಣಪತ್ರ ಕಳುಹಿಸಿದ ನಂತರವೂ, ಅಂತಿಮ ಬಾಕಿ ಬಿಡುಗಡೆಯನ್ನು ಸ್ವಲ್ಪ ತಡೆಯುವಂತೆ ಕೇಳುತ್ತಾರೆ ಎಂದು ತಿಳಿಸಿದರು.
ತೃಣಮೂಲ ಕಾಂಗ್ರೆಸ್ ಸದಸ್ಯ ಸಾಕೇತ್ ಗೋಖಲೆ, ರಾಜ್ಯಗಳ, ವಿಶೇಷವಾಗಿ ಪಶ್ಚಿಮ ಬಂಗಾಳಕ್ಕೆ ಜಿಎಸ್‌ಟಿ ಬಾಕಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ನಿರ್ದಿಷ್ಟವಾಗಿ ಕೆಲವು ರಾಜ್ಯಗಳನ್ನು ಹೆಸರಿಸುತ್ತೇನೆ. ಇದರಿಂದ ಜನರ ಮನಸ್ಸಿನಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
2022-23 ಆರ್ಥಿಕ ವರ್ಷದಲ್ಲಿ ಕರ್ನಾಟಕ ಹೊರತುಪಡಿಸಿ ಯಾವುದೇ ರಾಜ್ಯಗಳು ಎಜಿ ಪ್ರಮಾಣಪತ್ರವನ್ನು ನೀಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವರು ಸದನಕ್ಕೆ ಮಾಹಿತಿ ನೀಡಿದರು.