HEALTH TIPS

ವಾಹನ ಸವಾರರಿಗೆ ಗುಡ್ ನ್ಯೂಸ್: ಶೀಘ್ರವೇ ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಕೇಂದ್ರದ ಒಲವು!

                 ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದು ವರ್ಷದಿಂದ ಬದಲಾಗದೆ ಇರುವುದಕ್ಕೆ ವಾಹನ ಸವಾರರು ಬೇಸರವಾಗಿರುವ ನಡುವೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶೀಘ್ರದಲ್ಲೇ ಕಡಿಮೆಯಾಗುವ ನಿರೀಕ್ಷೆಯಿದೆ.

               ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರೀ ಇಳಿಕೆ ಕಂಡಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಇಳಿಸುವ ಬಗ್ಗೆ ದೊಡ್ಡ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

               2022ರಲ್ಲಿ ಕಚ್ಚಾತೈಲದ ಬೆಲೆ ಭಾರೀ ಏರಿಕೆಯಾಗಿದ್ದಾಗ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 17 ರೂ. ಹಾಗೂ ಡೀಸೆಲ್‌ಗೆ 35 ರೂ. ವರೆಗೂ ಭಾರೀ ನಷ್ಟ ಅನುಭವಿಸುತ್ತಿತ್ತು. ಆದರೆ ಬಳಿಕ ದರದಲ್ಲಿ ಭಾರೀ ಇಳಿಕೆಯಾಗಿದ್ದು, ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 7-10 ರೂ. ಹಾಗೂ ಡೀಸೆಲ್‌ಗೆ 3-4 ರೂ. ಲಾಭ ಮಾಡಿಕೊಳ್ಳುತ್ತಿದೆ. ಕಳೆದ 3 ತಿಂಗಳಲ್ಲಿ ಸುಮಾರು 28,000 ಕೋಟಿ ರೂ ರಷ್ಟು ಲಾಭ ಮಾಡಿಕೊಂಡಿದೆ.  ಸಚಿವಾಲಯವು ಈಗಾಗಲೇ OMC ಗಳೊಂದಿಗೆ ಕಚ್ಚಾ ಮತ್ತು ಚಿಲ್ಲರೆ ಬೆಲೆಯ ಸನ್ನಿವೇಶಗಳನ್ನು ಚರ್ಚಿಸಿದೆ.

               ಲೋಕಸಭಾ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಉಳಿದಿದೆ. ಈ ಸಂದರ್ಭ ತೈಲ ಬೆಲೆ ಇಳಿಕೆ ಮಾಡಿದರೆ ಹಣದುಬ್ಬರವನ್ನೂ ಹತೋಟಿಗೆ ತರಬಹುದು. ಹೀಗಾಗಿ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಶೀಘ್ರವೇ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಇಳಿಸಲು ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.

                 ಕಳೆದ ಮೂರು ತ್ರೈಮಾಸಿಕಗಳಲ್ಲಿ ತೈಲ ಕಂಪನಿಗಳು ಬಂಪರ್ ಲಾಭವನ್ನು ದಾಖಲಿಸುತ್ತಿವೆ. ಕಳೆದ ತ್ರೈಮಾಸಿಕದಲ್ಲಿ ಮೂರು ಸರ್ಕಾರಿ ಕಂಪನಿಗಳಾದ IOC, HPCL ಮತ್ತು BPCL ಒಟ್ಟಾಗಿ 28,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಲಾಭವನ್ನು ದಾಖಲಿಸಿವೆ ಎಂಬ ಅಂಶದಿಂದ ನೀವು ಇದನ್ನು ಅಂದಾಜು ಮಾಡಬಹುದು.

                ಹೆಚ್ಚಿದ ಕಚ್ಚಾ ತೈಲ ಬೆಲೆಯಲ್ಲಿ ಉಂಟಾದ ನಷ್ಟವನ್ನು ಸರಿದೂಗಿಸಲಾಗಿದೆ ಮತ್ತು ಈಗ ಅಗ್ಗದ ಕಚ್ಚಾ ತೈಲದ ಲಾಭವನ್ನು ಸಾಮಾನ್ಯ ಜನರಿಗೆ ನೀಡಬೇಕು ಎಂದು ಸರ್ಕಾರ ಹೇಳಿದೆಯೆಂದು ವರದಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries