HEALTH TIPS

ಅಯ್ಯಪ್ಪ ದರ್ಶನಗೈದ ನೂರು ವರ್ಷದ ಹಿರಿಯಜ್ಜಿ: ಪೊನ್ನಂಬಲವಾಸನ ಭೇಟಿಯಾದ ಪಾರುಕುಟಿಯಮ್ಮ

              ಶಬರಿಮಲೆ: ತನ್ನ 100ನೇ ವಯಸ್ಸಿನಲ್ಲಿ ಪಾರುಕುಟಿಯಮ್ಮ ಶಬರಿಮಲೆಗೆ ಭೇಟಿ ನೀಡಿ ಗಮನ ಸೆಳೆದರು. ಪಾರುಕುಟಿಯಮ್ಮ ತನ್ನ ಕುಟುಂಬದ ಮೂರು ತಲೆಮಾರುಗಳೊಂದಿಗೆ ಶಬರಿಮಲೆಗೆ ಭೇಟಿ ನೀಡಿದ್ದು, ಅವರು ವಯನಾಡ್‍ನ ಮುನ್ನಾನಕುಳಿ ಪರಯಾರುತೊಟ್ಟಂನವರು. 

            ಪಾರುಕುಟಿಯಮ್ಮ ತನ್ನ ಮೊಮ್ಮಗ ಗಿರೀಶ್ ಕುಮಾರ್ ಮತ್ತು ಮೊಮ್ಮಗನ ಮಕ್ಕಳಾದ ಅಮೃತೇಶ್, ಅನ್ವಿತಾ ಮತ್ತು ಆವಂತಿಕಾ ಅವರೊಂದಿಗೆ ಸನ್ನಿಧಾನಕ್ಕೆ ಬಂದಿದ್ದರು.

              ಇಷ್ಟು ದಿನ ಶಬರಿಮಲೆಗೆ ಹೋಗಲು ಅಜ್ಜಿ ತಡ ಮಾಡಿದ್ದು ಯಾಕೆ ಎಂಬ ಆವಂತಿಕಾಳ ಪ್ರಶ್ನೆಗೆ ಅಮ್ಮನ ಉತ್ತರ ಬೆರಗುಗೊಳಿಸಿತು.  ಬೇಗನೆ ಭೇಟಿ ನೀಡಬೇಕೆಂದು  ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ 100ನೇ ವಯಸ್ಸಿನಲ್ಲಿ ಶಬರಿಮಲೆಗೆ ಭೇಟಿ ನೀಡಲು ನಿರ್ಧರಿಸಿದರು. ಹಾಗಾಗಿ ಈಗ ಶಬರಿಮಲೆ ತಲುಪಿದೆ. ಪೆÇನ್ನಪ್ಪಾಡಿ ಮತ್ತು ಪೆÇನ್ನಂಬಲಂ ದರ್ಶನವಾಯಿತು. ಮನಸ್ಸು ತುಂಬಿದೆ. ಕಣ್ಣಲ್ಲಿ ನೀರು ತುಂಬಿಕೊಂಡು ಭಗವಂತನ ದರ್ಶನಗೈದ ಕೃತಾರ್ಥತೆ ಹಿರಿ ಜೀವದ್ದು.  ದಾರಿಯುದ್ದಕ್ಕೂ ಅನೇಕರು ನನಗೆ ಸಹಾಯ ಮಾಡಿದರು. ಅವರನ್ನೂ ದೇವರು ಕಾಪಾಡುತ್ತಾನೆ ಎಂದು ಹೇಳುತ್ತಿದ್ದಾಗ ಕಣ್ಣುಗಳು ತುಂಬಿ ಬಂದವು.


                ಪಾರುಕುಟ್ಟಿಯಮ್ಮ ಅವರ ಪುತ್ರಿ ಭಾನುಮತಿ ಅವರ ಪುತ್ರ ಗಿರೀಶ್ ಕುಮಾರ್ ಅವರ ಪತ್ನಿ ರಾಖಿ ಇಸ್ರೇಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ಕೊನೆಗಾಣಿಸಲು ಅಯ್ಯಪ್ಪನಿಗೆ ಪ್ರಾರ್ಥಿಸಿದ್ದೇನೆ ಎಂದು ಪಾರುಕುಟಿಯಮ್ಮ ಹೇಳಿದ್ದಾರೆ. 1923ರಲ್ಲಿ ಜನಿಸಿದ್ದರೂ ಶಬರಿಮಲೆ ಮೆಟ್ಟಿಲೇರಬೇಕೆಂಬ ಪಾರುಕುಟಿಯಮ್ಮ ಅವರ ಆಸೆ 100ನೇ ವರ್ಷದಲ್ಲಿ ಕೊನೆಗೂ ಈಡೇರಿತು.

              ಡಿಸೆಂಬರ್ 2 ರಂದು ಮುನ್ನಾನಕುಝಿಯಿಂದ ಆಗಮಿಸಿದ್ದ 14 ಸದಸ್ಯರ ಗುಂಪಿನೊಂದಿಗೆ ಪಾರುಕುಟಿಯಮ್ಮ ಪಂಬಾ ತಲುಪಿದರು. ಮುಂಜಾನೆ 3 ಗಂಟೆಗೆ ಪಂಬಾ ತಲುಪಿದ ತಂಡ ವಿಶ್ರಾಂತಿ ಪಡೆದು  ಮುಂಜಾನೆ 4 ಗಂಟೆಗೆ ಸನ್ನಿಧಿಗೆ ತಲುಪಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries