ಪತ್ತನಂತಿಟ್ಟ: ಮಂಡಲ ಉತ್ಸವದ ಪ್ರಯುಕ್ತ ಶಬರಿಮಲೆ ಸನ್ನಿಧಾನಕ್ಕೆ ಆಗಮಿಸುವ ಭಕ್ತರಿಗೆ ಉಚಿತ ವೈಫೈ ಸೇವೆ ಒದಗಿಸಲು ದೇವಸ್ವಂ ಮಂಡಳಿ ಸಜ್ಜಾಗಿದೆ.
ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಮಾತನಾಡಿ, ಅಯ್ಯಪ್ಪ ಭಕ್ತರಿಗೆ ಬೆಟ್ಟ ಹತ್ತಲು ಗರಿಷ್ಠ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಿಎಸ್‍ಎನ್‍ಎಲ್ ಸಹಯೋಗದಲ್ಲಿ ಈ ಸೇವೆಯನ್ನು ಭಕ್ತರಿಗೆ ತಲುಪಿಸಲಾಗುವುದು.
ಈ ಮೂಲಕ ಭಕ್ತರಿಗೆ ಗರಿಷ್ಠ ಅರ್ಧ ಗಂಟೆ ಉಚಿತ ವೈ-ಫೈ ಸಿಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನೆಟ್‍ವರ್ಕ್ ಬಿಕ್ಕಟ್ಟಿನಿಂದಾಗಿ ಭಕ್ತರು ಹೆಚ್ಚಿನ ಸಂದರ್ಭಗಳಲ್ಲಿ ಮನೆ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರ ಒದಗಿಸುವ ಉದ್ದೇಶದಿಂದ ದೇವಸ್ವಂ ಮಂಡಳಿ ಬಿಎಸ್‍ಎನ್‍ಎಲ್ ಸಹಯೋಗದಲ್ಲಿ ಈ ಯೋಜನೆ ರೂಪಿಸಿದೆ. ಯೋಜನೆಯ ಮೊದಲ ಹಂತವಾಗಿ ಪಾಪಂತಲ್, ತಿರುಮುಟ್ಟಂ, ಸನ್ನಿಧಾನಂ, ಮಾಳಿಗಪ್ಪುರಂ, ಅಹ್ರಿಯ ಭಾಗಗಳು, ಮಾಳಿಗÀಪ್ಪುರಂನಲ್ಲಿರುವ ಅಪ್ಪಂ-ಅರವಣ ಕೌಂಟರ್‍ಗಳು, ಮರಾಮತ್ ಕಾಂಪ್ಲೆಕ್ಸ್ ಮತ್ತು ಆಸ್ಪತ್ರೆಗಳಲ್ಲಿ ವೈ-ಫೈ ಲಭ್ಯವಿರಲಿದೆÉ.
ಆರಂಭಿಕ ಹಂತದಲ್ಲಿ, 15 ವೈ-ಫೈ ಹಾಟ್‍ಸ್ಪಾಟ್‍ಗಳು ಇರುತ್ತವೆ. ಪ್ರಸ್ತುತ, ಪಂಬಾ ಎಕ್ಸ್‍ಚೇಂಜ್‍ನಿಂದ ಸನ್ನಿಧಾನಂವರೆಗೆ ನೀಲಿಮಲ, ಅಪಾಚೆಮೇಡು, ಸರಂಕುಟ್ಟಿ ಮತ್ತು ಮರಕುಟ್ಟಂನಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಹಾಕಲಾಗಿದೆ. ಈ ಕಾರಣದಿಂದಾಗಿ, ವೈ-ಫೈ ಯೋಜನೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಬಿ.ಎಸ್.ಎನ್.ಎಲ್. ಹೇಳಿದೆ.