ಕುಂಬಳೆ : ಪಂಚರಾಜ್ಯ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಪ್ರಯುಕ್ತ ಕುಂಬಳೆ ನಗರದಲ್ಲಿ ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿಯ ಆಶ್ರಯದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಕುಂಬಳೆ ಘಟಕ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮಿತಿ ಸದಸ್ಯ ಮುರಳಿಧರ ಯಾದವ್ ಅವರು ಉದ್ಘಾಟಿಸಿ ಮಾತನಾಡಿ ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸ್ಪಷ್ಟ ಬಹುಮತದೊಂದಿದೆ 3 ನೇ ಬಾರಿ ನರೇಂದ್ರ ಮೋದಿಜಿಯವರು ಪ್ರಧಾನ ಮಂತ್ರಿ ಆಗುವುದು ಖಚಿತ ಎಂದು ಹೇಳಿದರು.
ಬಿಜೆಪಿ ಮಂಡಲ ಉಪಾಧ್ಯಕ್ಷ ಕೆ. ರಮೇಶ ಭಟ್, ಕಾರ್ಯದರ್ಶಿ ಕೆ. ಸುಧಾಕರ್ ಕಾಮತ್, ಯುವಮೋರ್ಚಾ ಕುಂಬಳೆ ಮಂಡಲ ಅಧ್ಯಕ್ಷ ಅವಿನಾಶ ಕಾರಂತ, ಜನಪ್ರತಿನಿಧಿಗಳಾದ ಮೋಹನ ಕೆ, ಅಜಯ ಎಂ, ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ಉಪಾಧ್ಯಕ್ಷ ಜಗದೀಶ ಪೇರಾಲು, ಹಿರಿಯರಾದ ಬಾಬು ಗಟ್ಟಿ, ಮಧುಸೂದನ್, ವೇಣು ಕಡಪ್ಪುರ, ಕಾರ್ಯಕರ್ತರಾದ ಕೆ. ಮಧುಸೂದನ್ ಕಾಮತ್, ಅಭಿಲಾಷ್, ವರುಣ ಕುಮಾರ್, ಜಗದೀಶ್ ಕೋಟೆಕಾರ್, ಗಣೇಶ್ ಆಚಾರ್ಯ ಉಪಸ್ಥಿತರಿದ್ದರು. ಬಿಜೆಪಿ ಕುಂಬಳೆ ಪಂಚಾಯತಿ ಪ್ರಧಾನ ಕಾರ್ಯದರ್ಶಿ ಜಿತೇಶ್ ನಾೈಕಾಪು ಸ್ವಾಗತಿಸಿ, ಯುವಮೋರ್ಚಾ ಕುಂಬಳೆ ಪಂಚಾಯತಿ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ವಂದಿಸಿದರು. ಸಿಡಿಮದ್ದು ಸಿಡಿಸಿ ಸಂಭ್ರಮಿಸಲಾಯಿತು.