ಪತ್ತನಂತಿಟ್ಟ: ಶಬರಿಮಲೆ ಸನ್ನಿಧಾನಕ್ಕೆ ಆಗಮಿಸುವ ಅಯ್ಯಪ್ಪ ಭಕ್ತರಿಗೆ ತುರ್ತು ಸೌಲಭ್ಯ ಕಲ್ಪಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ರಜೆ ದಿನಗಳಲ್ಲಿ ಅಯ್ಯಪ್ಪ ಭಕ್ತರ ನೂಕುನುಗ್ಗಲು ಹೆಚ್ಚುತ್ತಿದೆ. ಇದನ್ನು ಆಧರಿಸಿ ಹೈಕೋರ್ಟ್ ವಿಶೇಷ ವ್ಯವಸ್ಥೆ ಕಲ್ಪಿಸಲು ನಿರ್ದೇಶಿಸಿದೆ.
ಕೊಟ್ಟಾಯಂ, ಪಾಲಾ ಮತ್ತು ಪೊಂಕುನ್ನಂ ಸೇರಿದಂತೆ ಭಕರು ಸಿಲುಕಿರುವ ಪ್ರದೇಶಗಳಲ್ಲಿ ತುರ್ತು ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಗತ್ಯಬಿದ್ದರೆ ರಾಜ್ಯ ಪೋಲೀಸ್ ವರಿಷ್ಠರೂ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆಹಾರ ಮತ್ತು ನೀರು ಸೇರಿದಂತೆ ಅಗತ್ಯಗಳನ್ನು ಪೂರೈಸಲಾಗದಿರುವುದು ಈಗಿನ ದೊಡ್ಡ ಸವಾಲಾಗಿದ್ದು ಅದನ್ನು ಪರಿಹರಿಸಬೇಕು ಎಂದು ನಿರ್ದೇಶಿಸಲಾಗಿದೆ.
ಯಾವುದೇ ಬುಕ್ಕಿಂಗ್ ಇಲ್ಲದೆ ಆಗಮಿಸುವ ಭಕ್ತರು ಸಾಗುವ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂದೂ ಸೂಚಿಸಿದೆ. ಸೌಲಭ್ಯಗಳ ಕೊರತೆಯ ಬಗ್ಗೆ ದೂರುಗಳು ಬಂದ ನಂತರ ಹೈಕೋರ್ಟ್ ರಜೆಯ ಮೇಲೆ ವಿಶೇಷ ಸಭೆ ನಡೆಸಿತು. ಸನ್ನಿಧಾನಂನಲ್ಲಿ ಭಕ್ತರ ದಂಡೇ ಹರಿದು ಬರುತ್ತಿದೆ.