ಕುಂಬಳೆ: ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆದೇಶದಂತೆ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟರ ನಿರ್ದೇಶನದಲ್ಲಿ ಗುರುವಾರ ಪೂರ್ವಾಹ್ನ 9 ಗಂಟೆಯಿಂದ ಅಪರಾಹ್ನ 3-30 ರ ತನಕ ಭಾಗವತ ಪಾರಾಯಣ ಜರಗಿತು. ವೇದಮೂರ್ತಿ ಪಾದೇಕಲ್ಲು ಬಾಲಚಂದ್ರ ಭಟ್ಟ, ವೇದಮೂರ್ತಿ ಮುಗುಳಿ ರಾಮ ಭಟ್ಟ, ವೇದಮೂರ್ತಿ ಬರ್ಲಾಯಬೆಟ್ಟು ಮುರಾರಿ ವೆಂಕಟೇಶ ಭಟ್ ಭಾಗವತ ದಶಮಸ್ಕಂದ ಪಾರಾಯಣ ಮಾಡಿದರು. ಸಂಸ್ಕøತ ಅಧ್ಯಾಪಕ ಬಾಲಕೃಷ್ಣ ಶರ್ಮ ವಂದಿಸಿದರು.