ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಬೃಹತ್ ಯೋಜನೆ ಸಾಂಸ್ಕೃತಿಕ ಭವನದ ಲೋಕಾರ್ಪಣೆ ಕಾರ್ಯಕ್ರಮ ಡಿ. 26ರಂದು ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀ ಎಡನೀರು ಮಠದಲ್ಲಿ ಜರುಗಿತು.
ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಮಂತ್ರಣಪತ್ರಿಕೆ ಲೋಕಾರ್ಪಣೆಗೈದರು. ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀಗಳು, ಸಿರಿಬಾಗಿಲು ಸಾಂಸ್ಕøತಿಕ ಭವನ ಕಾಸರಗೋಡಿನ ಸಂಸ್ಕøತಿಕ ಇತಿಹಾಸದ ಮೈಲಿಗಲ್ಲಾಗಿದ್ದು, ಕಾಸರಗೋಡಿನ ಚರಿತ್ರೆಯ ಪುಟಗಳಲ್ಲಿ ಈ ಹೆಸರು ದಾಖಲಾಗಲಿ ಎಂದು ಹಾರೈಸಿದರು.
ಸ್ವಾಗತ ಸಮಿತಿಯ ಸಂಚಾಲಕ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ. ರಂಗ ನಿರ್ದೇಶಕ ಮೂರ್ತಿ ದೇರಾಜೆ, ಕನ್ನಡ ಗ್ರಾಮದ ಶಿವರಾಮ ಕಾಸರಗೋಡು, ಕವಿ ರಾಧಾಕೃಷ್ಣ ಉಳಿಯತ್ತಡ್ಕ, ಶ್ಯಾಮ್ ಪ್ರಸಾದ್ ಕುಂಚಿನಡ್ಕ, ರಾಜಾರಾಮ ರಾವ್ ಮಿಯಪದವು, ಶ್ರೀಮುಖ ಯಸ್. ಅರ್ ಮಯ್ಯ, ಶ್ರೀರಾಜ ಮಯ್ಯ ಉಪಸ್ಥಿತರಿದ್ದರು.
ಡಿ. 26ರಂದು ರಾಜರ್ಷಿ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಾಂಸ್ಕøತಿಕ ಭವನ ಲೋಕಾರ್ಪಣೆಗೈಯುವರು. ಅಂದು ಸಂಜೆ 7 ರಿಂದ ಶ್ರೀ ಧರ್ಮಸ್ಥಳ ಮೇಳದ ವರಿಂದ 'ನಂದಿ-ನಂದಿನಿ' ಯಕ್ಷಗಾನ ಬಯಲಾಟ ಜರುಗಲಿರುವುದು.