ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಬದಿಯಡ್ಕ ಘಟಕದ ಮಹಾಸಭೆ ಸೋಮವಾರ ಪೆರಡಾಲ ನವಜೀವನ ವಿದ್ಯಾಲಯದಲ್ಲಿ ಜರಗಿತು. ಘಟಕದ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಂಚಣಿದಾರರ ಸಮಸ್ಯೆಗಳಿಗೆ ಪರಿಹಾರವನ್ನು ಕಾಣುವಲ್ಲಿ ರಾಜ್ಯಸರ್ಕಾರವು ಆಸಕ್ತಿಯನ್ನು ವಹಿಸುತ್ತಿಲ್ಲವೆಂಬುದಾಗಿ ಮೇಲ್ನೋಣಕ್ಕೆ ಗೋಚರವಾಗುತ್ತಿದೆ. ಅನೇಕ ವರ್ಷಗಳ ಕಾಲ ಸೇವೆನ್ನು ನೀಡಿದ ನಿವೃತ್ತರ ಗೋಳನ್ನು ಕೇಳುವವರಿಲ್ಲ. ಕಳೆದ ಮೂರು ವರ್ಷಗಳಿಂದ ಸಿಗಬೇಕಾದ ತುಟ್ಟಿಭÀತ್ತೆಯನ್ನು ತಡೆಹಿಡಿದಿರುವ ಕೇರಳ ಸರ್ಕಾರದ ಕ್ರಮ ಖಂಡನೀಯ ಎಂದರು. ಡಿ. 30ರಂದು ಹೊಸಂಗಡಿ ಗುರುನರಸಿಂಹ ಸಭಾ ಭÀವನದಲ್ಲಿ ಜರಗಲಿರುವ ಜಿಲ್ಲಾ ಮಹಾಸಭೆಯಲ್ಲಿ ಸದಸ್ಯರೆಲ್ಲಾ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಕರೆಯಿತ್ತರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗಿ ಸಂಘದ ಸದಸ್ಯತ್ವವನ್ನು ಪಡೆದವರನ್ನು ಅಭಿನಂದಿಸಲಾಯಿತು. ಜಿಲ್ಲಾ ಸಮಿತಿ ಸದಸ್ಯ ಶಿವಶಂಕರ ಭÀಟ್ ಗುಣಾಜೆ, ಕೋಶಾಧಿಕಾರಿ ಕೇಶವ ಪ್ರಸಾದ ಕುಳಮರ್ವ ಮಾತನಾಡಿ ಸಂಘಟನಾತ್ಮಕ ವಿಚಾರಗಳನ್ನು ಪ್ರಸ್ತುತಪಡಿಸಿದರು. ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ, ಅನುಮೋದನೆ ನಡೆಯಿತು. ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ಶಿವಶಂಕರ ಭಟ್ ಗುಣಾಜೆ, ಅಧ್ಯಕ್ಷರಾಗಿ ಮೈರ್ಕಳ ನಾರಾಯಣ ಭಟ್, ಉಪಾಧ್ಯಕ್ಷರಾಗಿ ಈಶ್ವರ ನಾಯ್ಕ ಪೆರಡಾಲ, ಹರೀಶ ಇಕ್ಕೇರಿ, ಕಾರ್ಯದರ್ಶಿಯಾಗಿ ಉದನೇಶ ವೀರ ಕಿಳಿಂಗಾರು, ಜೊತೆಕಾರ್ಯದರ್ಶಿಯಾಗಿ ಸದಾನಂದ ನಾಯ್ಕ ನೀರ್ಚಾಲು, ಕೋಶಾಧಿಕಾರಿಯಾಗಿ ಕೃಷ್ಣ ಭಟ್ ಪೆರ್ವ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು. ನಿವೃತ್ತ ಅಧ್ಯಾಪಿಕೆಯರಾದ ಜಯಶ್ರೀ, ಮಾಲತಿ, ಶಾಂತಕುಮಾರಿ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಉದನೇಶವೀರ ಸ್ವಾಗತಿಸಿ, ಉಪಾಧ್ಯಕ್ಷ ಈಶ್ವರ ನಾಯ್ಕ ಪೆರಡಾಲ ವಂದಿಸಿದರು.