ತಿರುವನಂತಪುರಂ: ಕೆಎಸ್‍ಇಬಿ ಹೆಸರಿನಲ್ಲಿ ಬರುತ್ತಿರುವ ನಕಲಿ ಸಂದೇಶಗಳ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಹಣ ಪಾವತಿ ಮಾಡದಿದ್ದರೆ ಹಾಗೂ ಮಾಹಿತಿ ನೀಡದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಕೆಲ ಎಸ್ ಎಂಎಸ್ ಸಂದೇಶಗಳು ಹರಿದಾಡುತ್ತಿವೆ.
ಕೆಎಸ್‍ಬಿ ಹೆಸರಿನಲ್ಲಿ ಇಂತಹ ನಕಲಿ ಸಂದೇಶಗಳಿಗೆ ಗ್ರಾಹಕರು ಮರುಳಾಗಬೇಡಿ ಎಂದು ಸ್ವತಃ ಕೆಎಸ್‍ಇಬಿ ಎಚ್ಚರಿಕೆ ನೀಡಿದೆ.
ಕಳುಹಿಸುವ ಸಂದೇಶಗಳು 13-ಅಂಕಿಯ ಗ್ರಾಹಕ ಸಂಖ್ಯೆ, ಪಾವತಿಸಬೇಕಾದ ಮೊತ್ತ ಮತ್ತು ಪಾವತಿ ಲಿಂಕ್‍ನಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ. ಕೆಎಸ್‍ಇಬಿ ಅಧಿಕಾರಿಗಳು ಯಾವುದೇ ಹಂತದಲ್ಲೂ ಗ್ರಾಹಕರ ಬ್ಯಾಂಕ್ ಖಾತೆ ವಿವರ, ಒಟಿಪಿ ಇತ್ಯಾದಿಗಳನ್ನು ಕೇಳುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫೇಸ್ ಬುಕ್ ಮೂಲಕ ಕೆಎಸ್ ಇಬಿ ಎಚ್ಚರಿಕೆ ನೀಡಿದೆ. ಅಂತಹ ಸಂದೇಶಗಳು ಅಥವಾ ಕರೆಗಳನ್ನು ತಕ್ಷಣವೇ ಕಸ್ಟಮರ್ ಕೇರ್ ಅಥವಾ ಕೆ.ಎಸ್.ಇ.ಬಿ ಸೆಕ್ಷನ್ ಆಫೀಸ್‍ಗೆ ವರದಿ ಮಾಡಲು ಸಲಹೆ ನೀಡಲಾಗಿದೆ.