ಮಂಜೇಶ್ವರ: ಮೀಯಪದವು ಚಿಗುರುಪಾದೆಯ ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘದ ಭಜನಾ ಸಂಭ್ರಮ ಕಾರ್ಯಕ್ರಮ ಮೀಯಪದವು ಶಾಲಾ ಮೈದಾನದಲ್ಲಿ ಜರಗಿತು. ಸಿಂಹ ಕುಣಿತ ಹಾಗೂ ಮಕ್ಕಳ ಕುಣಿತ ಭಜನೆಯೊಂದಿಗೆ ಮೀಯಪದವು ಶ್ರೀಮೊಗೇರ ದೈವಕ್ಷೇತ್ರಗಳ ವಠಾರದಿಂದ ಹೊರಟು ಮೀಯಪದವು ಶಾಲಾ ಮೈದಾನಕ್ಕೆ ಅದ್ದೂರಿ ಮೆರವಣಿಗೆ ನಡೆಸುವುದರ ಮೂಲಕ ಭಜನಾ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡುಗೈ ದಾನಿ, ಹೇರಂಭ ಇಂಡಸ್ಟ್ರೀಸ್ ಪ್ರೈ.ಲಿ.ಇದರ ಮ್ಹಾಲಕ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ವಹಿಸಿ ಶುಭ ಹಾರೈಸಿದರು. ಕೊಂಡೆವೂರು ಆಶ್ರಮದ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಆಶಿರ್ವಚನ ನೀಡಿದರು. ಕೈರಂಗಳ ಶ್ರೀ ಶಾರದಾ ವಿದ್ಯಾಕೇಂದ್ರದ ಸಂಚಾಲಕÀ ರಾಜಾರಾಮ ಭಟ್ ಹಾಗೂ ಮೀಯಪದವು ಎಸ್.ವಿ.ವಿ ಎಚ್.ಎಸ್.ಎಸ್ ಶಾಲೆಯ ಸಂಚಾಲಕÀ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಇದೇ ಸಂದರ್ಭ ಭಜನಾ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯರಾದ ಮಾರಪ್ಪ ಭಂಡಾರಿ ಕೌಡೂರು ಬೀಡು,ಬಿರ್ಮು ಶೆಟ್ಟಿ ಕುಳೂರು, ರಾಮ.ಎನ್ ಮೀಯಪದವು, ವಸಂತ ಭಟ್ ತೊಟ್ಟೆತ್ತೋಡಿ, ಸರೋಜ.ಎಂ ಮೀಯಪದವು, ಮುತ್ತು ಶೆಟ್ಟಿ ಬಾಳಿಯೂರು,ಜನಾರ್ದನ ರೈ ತಲೆಕ್ಕಳ,ಲಕ್ಷ್ಮಣ ಶೆಟ್ಟಿಗಾರ್ ಕಡಂಬಾರು, ರಘುನಾಥ ಶೆಟ್ಟಿ ಕೊಮ್ಮಂಗಳ, ಮಾಧವ ಆಚಾರಿ ಮದಂಗಲ್ಲು ಇವರನ್ನು ಗಣ್ಯರ ಸಮಕ್ಕ್ಷಮದಲ್ಲಿ ಗೌರವಿಸಲಾಯಿತು. ಸನ್ಮಾನಿತರ ಪರಿಚಯವನ್ನು ಸಂಘದ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ನಿರ್ವಹಿಸಿದರು.ಸನ್ಮಾನಿತರ ಪರವಾಗಿ ವಸಂತ ಭಟ್ ತೊಟ್ಟೆತ್ತೋಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೀಯಪದವು ಶ್ರೀ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ್. ರಾವ್.ಆರ್.ಎಂ ಹಾಗೂ ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘದ ಅಧ್ಯಕ್ಷ ವೇ.ಮೂ ಗಣೇಶ್ ನಾವಡ ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ಮೈದಾನದಲ್ಲಿ ಕುಣಿತ ಭಜನಾ ಪ್ರದರ್ಶನ ಜರಗಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಊರ ಪ್ರತಿಭೆಗಳಿಂದ ನೃತ್ಯ ವೈಭವ ಹಾಗೂ ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ಇವರಿಂದ ಭಾರತ ರತ್ನ ಎಂಬ ಯಕ್ಷಗಾನ ಬಯಲಾಟ ಕಾರ್ಯಕ್ರಮವು ಜರಗಿತು. ಎಸ್.ವಿ.ವಿ.ಎಚ್.ಎಸ್ ಎಸ್ ಶಾಲೆಯ ಅಧ್ಯಾಪಕÀ ರಾಜಾರಾಮ ರಾವ್ ಸ್ವಾಗತಿಸಿ,ಸಂಘದ ಸದಸ್ಯ ಲಕ್ಷ್ಮೀಶ್ ಬೊಳುಂಬು ವಂದಿಸಿದರು. ಸದಸ್ಯ ಬ್ರಿಜೇಶ್ ಎಂ ಹಾಗೂ ರಘು ರಾವ್ ನಿರೂಪಿಸಿದರು.