ಕಾಸರಗೋಡು: ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವದ ನಾಲ್ಕನೇ ದಿನವಾದ ಕ್ರಿಸ್‍ಮಸ್ ದಿನಾಚರಣೆ ಸಂದರ್ಭ ಖ್ಯಾತ ಹಿನ್ನೆಲೆ ಗಾಯಕ ಎಂ.ಜಿ.ಶ್ರೀಕುಮಾರ್ ನೇತೃತ್ವದಲ್ಲಿ ಮೆಗಾ ಮ್ಯೂಸಿಕಲ್ ನೈಟ್ ನಡೆಯಿತು. ಬೇಕಲ್ ಫೆಸ್ಟ್ ಜತೆಗೆ ಕ್ರಿಸ್ಮಸ್ ಸಂಭ್ರಮಾಚರಣೆಗಾಗಿ ಬೇಕಲದ ಕರಾವಳಿಯಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು. ಸ್ವಾಮಿನಾಥ ಪರಿಪಾಲಯಂ ಸುಮಾ....ಹಾಡಿನೊಂದಿಗೆ ಎಂ.ಜಿ ಶ್ರೀಕುಮಾರ್ ಕಾರ್ಯಕ್ರಮ ಆರಂಭಿಸುತ್ತಿದ್ದಂತೆ ಪ್ರೇಕ್ಷಕರ ಕರತಾಡನ ಮುಗಿಲುಮುಟ್ಟಿತ್ತು. ಕ್ರಿಸ್‍ಮಸ್ ಹಬ್ಬವಾಗಿದ್ದರಿಂದ ಬೇಕಲಕ್ಕೆ ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ಗಾಯಕರಾದ ಮೃದುಲಾ ವಾರಿಯರ್, ಅಂಜು, ಹನುನಾ, ತಾರಾ ಮತ್ತು ರೆಹಮಾನ್ ಸೇರಿದಂತೆ ಪ್ರಮುಖ ಹಾಡುಗಾರರು ಸಮಾರಂಭಕ್ಕೆ ಕಳೆಯೇರಿಸಿದರು.