ಕಾಸರಗೋಡು: ಜಿಲ್ಲೆಯಲ್ಲಿ ಎಫ್‍ಎಂ ಮಲಯಾಳ ರೇಡಿಯೋ ಅಲಭ್ಯತೆ ಮತ್ತು ಹೊಸ ರೇಡಿಯೋ ಕೇಂದ್ರಗಳ ಸ್ಥಾಪನೆಯ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಲಾದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಸಂಪರ್ಕ ಸಚಿವ ಶ್ರೀ ಅನುರಾಗ್ ಠಾಕೂರ್ ಸದನದಲ್ಲಿ ಲಿಖಿತ ಉತ್ತರ ನೀಡಿರುವುದಾಗಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಪ್ರಸಕ್ತ ಆಕಾಶವಾಣಿ ಕಾಸರಗೋಡಿನಲ್ಲಿ 100 ವ್ಯಾಟ್ ಎಫ್‍ಎಂ ರಿಲೇ ಸ್ಟೇಷನ್ ಹೊಂದಿದೆ. ರೇಡಿಯೋ ಪ್ರಸಾರ ಚಟುವಟಿಕೆಗಳಲ್ಲಿ ಭೌಗೋಳಿಕ ಗಡಿಗಳು ಕೇಂದ್ರ ಮಾಹಿತಿ ಮತ್ತು ಕರ್ನಾಟಕದ ನೆರೆಯ ಜಿಲ್ಲೆಗಳಾದ ಮಡಿಕೇರಿ ಮತ್ತು ಉಡುಪಿಯಲ್ಲಿರುವ ಆಕಾಶವಾಣಿ ಎಫ್‍ಎಂ ಟ್ರಾನ್ಸ್‍ಮಿಟರ್‍ಗಳಿಂದ ಎಫ್‍ಎಂ ಪ್ರಸರಣವು ಕಾಸರಗೋಡು ಜಿಲ್ಲೆಯ ಕೆಲವು ಭಾಗಗಳಲ್ಲಿಯೂ ಲಭ್ಯವಿದೆ. ಕಣ್ಣೂರಿನ ಎಫ್‍ಎಂ ರೇಡಿಯೊ ಸ್ಟೇಷನ್‍ನ ಪ್ರಸರಣ ಸಾಮಥ್ರ್ಯವನ್ನು 6 ಕಿಲೋವ್ಯಾಟ್‍ನಿಂದ 10 ಕಿಲೋವ್ಯಾಟ್‍ಗೆ ಹೆಚ್ಚಿಸಲಾಗಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ. ಇದಲ್ಲದೆ, ಮೂರು ಖಾಸಗಿ ಎಫ್‍ಎಂ ರೇಡಿಯೊ ಚಾನೆಲ್‍ಗಳು 3 ಕಿಲೋವ್ಯಾಟ್ (ಕನಿಷ್ಠ) ವರೆಗಿನ ಪ್ರಸರಣ ಶಕ್ತಿಯೊಂದಿಗೆ 10 ಕೆಡಬ್ಲ್ಯೂ(ಗರಿಷ್ಠ)ಸಾಮಥ್ರ್ಯದ ಮೂರು ಖಾಸಗಿ ಎಫ್‍ಎಮ್ ಕಣ್ಣೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಾಸರಗೋಡಿನಲ್ಲಿ ಸಮುದಾಯ ರೇಡಿಯೋ ಕೇಂದ್ರ ಸ್ಥಾಪನೆಗೆ ಭಾರತ ಸರ್ಕಾರವು ತಲಶ್ಶೇರಿ ಸಮಾಜ ಸೇವಾ ಸಂಸ್ಥೆಯೊಂದಿಗೆ ಅನುಮತಿ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಸಂಸದರು ಮಾಹಿತಿ ನೀಡಿದ್ದು ಪ್ರಸಕ್ತ ಯಾವುದೇ ಹೊಸ ಅರ್ಜಿಗಳಿಲ್ಲ ಎಂದು ಸಚಿವರು ತಿಳಿಸಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಈ ಸಂಸ್ಥೆಗೆ ಅನುಮತಿ ನೀಡುವಂತೆ ಸಚಿವಾಲಯದ ಮೇಲೆ ಅಗತ್ಯ ಒತ್ತಡ ಹೇರಿರುವುದಾಗಿ ಸಂಸದರು ಹೇಳಿಕೆಯಲ್ಲಿ ತಿಳಿಸಿದ್ದಾರೆ.