ಕೊಚ್ಚಿ: ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ (73) ಇಂದು ಸಂಜೆ ನಿಧನರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
2015 ರಿಂದ ಸಿಪಿಐ ರಾಜ್ಯ ಕಾರ್ಯದರ್ಶಿಯಾಗಿದ್ದ ಕಾನಂ ಅವರು ಆರೋಗ್ಯದ ಕಾರಣದಿಂದ ಮೂರು ತಿಂಗಳ ಕಾಲ ರಜೆಯಲ್ಲಿದ್ದರು. ಅಪಘಾತದಲ್ಲಿ ಕಾನಂ ಅವರ ಎಡಗಾಲಿಗೆ ಮೊದಲೇ ಪೆಟ್ಟಾಗಿತ್ತು. ಮಧುಮೇಹವು ಅದನ್ನು ಉಲ್ಬಣಗೊಳಿಸಿತು. ಕಾಲಿನ ಗಾಯಗಳು ವಾಸಿಯಾಗಿರಲಿಲ್ಲ.