ಒಟ್ಟಾವ: ಸಿಖ್ ಪ್ರತ್ಯೇಕತಾವಾದಿ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾಗಿಯಾದ ಇಬ್ಬರು ಶಂಕಿತರನ್ನು ಕೆನಡಾ ಪೊಲೀಸರು ಶೀಘ್ರವೇ ಬಂಧಿಸುವ ಸಾಧ್ಯತೆ ಇದ್ದು, ಇಬ್ಬರು ಶಂಕಿತರು ಕೆನಡಾದಲ್ಲೇ ಇದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಒಟ್ಟಾವ: ಸಿಖ್ ಪ್ರತ್ಯೇಕತಾವಾದಿ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾಗಿಯಾದ ಇಬ್ಬರು ಶಂಕಿತರನ್ನು ಕೆನಡಾ ಪೊಲೀಸರು ಶೀಘ್ರವೇ ಬಂಧಿಸುವ ಸಾಧ್ಯತೆ ಇದ್ದು, ಇಬ್ಬರು ಶಂಕಿತರು ಕೆನಡಾದಲ್ಲೇ ಇದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
'ಶಂಕಿತ ಹಂತಕರು ನಿಜ್ಜರ್ ಹತ್ಯೆಯ ನಂತರ ಕೆನಡಾ ತೊರೆದಿಲ್ಲ.
ಹಂತಕರು ಮತ್ತು ಭಾರತ ಸರ್ಕಾರದ ನಡುವಿನ ಸಂಪರ್ಕದ ಬಗ್ಗೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸುವಾಗ ಬಹಿರಂಗಪಡಿಸಲಿದ್ದಾರೆ ಎಂದು ಈ ವರದಿ ಹೇಳಿದೆ.
ಪತ್ರಿಕೆಯ ವರದಿ ಪ್ರಕಾರ, ತನಿಖಾ ತಂಡವು 'ಶಂಕಿತರ ಬಂಧನ ಸನ್ನಿಹಿತವಾಗಿರುವ ಬಗ್ಗೆ ತಿಳಿದಿದೆ. ಆದರೆ, ತನಿಖೆ ಇನ್ನೂ ಪ್ರಗತಿಯಲ್ಲಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಹೇಳಿದೆ.