ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಾಸರಗೋಡು ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಯಂ.ಆರ್.ಶ್ರದ್ಧಾ ಕನ್ನಡ ಭಾಷಣದಲ್ಲಿ ಎಗ್ರೇಡ್‍ನೊಂದಿಗೆ ಪ್ರಥಮ, ಸಂಸ್ಕøತ ಕಂಠಪಾಠ ಎ ಗ್ರೇಡ್ ದ್ವಿತೀಯ, ಕವಿತಾರಚನೆ ಕನ್ನಡ ಎ ಗ್ರೇಡ್ ತೃತೀಯ, ಕವಿತಾರಚನೆ ಸಂಸ್ಕೃತ ಎ ಗ್ರೇಡ್ ದ್ವಿತೀಯ, ಸಿದ್ಧರೂಪೆÇೀಚ್ಛಾರಣಂ ಎ ಗ್ರೇಡ್, ಸಂಸ್ಕೃತ ಸಂಘಗಾನಮ್ ಹಾಗೂ ವಂದೇ ಮಾತರಮ್ ನಲ್ಲಿ ಪ್ರಥಮ ಸ್ಥಾನಗಳನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಕಲ್ಲಕಟ್ಟ ಯಂ ಎ ಯು ಪಿ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ರಮೇಶ್ ಮರ್ದಂಬೈಲ್ ಹಾಗೂ ಶಾಂತ ಟೀಚರ್ ಅವರ ಪುತ್ರಿಯಾಗಿದ್ದಾಳೆ.