ವಾಷಿಂಗ್ಟನ್: ಧಾರ್ಮಿಕ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಅವರ ಸಮಸ್ಯೆಗಳನ್ನು ಅಮೆರಿಕ ಕಾಂಗ್ರೆಸ್‌ನಲ್ಲಿ ಪ್ರಸ್ತಾಪಿಸಲು ಕಾಂಗ್ರೆಷನಲ್ ಹಿಂದೂ ಕಾಕಸ್ ಆರಂಭವನ್ನು ಅಮೆರಿಕದ ರಿಪಬ್ಲಿಕನ್ ಪಕ್ಷದ ಸಂಸದರಾದ ಪೀಟ್ ಸೆಷನ್ಸ್ ಮತ್ತು ಎಲಿಸ್ ಸ್ಟೆಫಾನಿಮ್ ಘೋಷಿಸಿದರು.

'ಕಾಂಗ್ರೆಷನಲ್ ಹಿಂದೂ ಕಾಕಸ್‌ನ ಉದ್ಘಾಟನೆಯು ರಾಜಧಾನಿಯಲ್ಲಿ ಇರುವ ಹಿಂದೂ-ಅಮೆರಿಕನ್ ಸಮುದಾಯದ ಧ್ವನಿಯನ್ನು ಗುರುತಿಸುವ ಮತ್ತು ವರ್ಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ನಾವು ಅವರ ಕಳವಳಗಳನ್ನು ಪರಿಹರಿಸಲು, ಅವರ ಕೊಡುಗೆಗಳನ್ನು ಸಂಭ್ರಮಿಸಲು ಮತ್ತು ಅವರ ದೃಷ್ಟಿಕೋನಗಳನ್ನು ಉನ್ನತ ಮಟ್ಟದಲ್ಲಿ ಪರಿಗಣಿಸಲು ಬದ್ಧರಾಗಿದ್ದೇವೆ' ಎಂದು ಸೆಷನ್ಸ್ ಹೇಳಿದರು.
ಪೀಟ್ ಸೆಷನ್ಸ್ ಮತ್ತು ಸ್ಟೆಫಾನಿಮ್ ಅವರ ಅಧ್ಯಕ್ಷತೆಯಲ್ಲಿ, ಹಿಂದೂ-ಅಮೆರಿಕನ್ ಸಮುದಾಯದ ಮೌಲ್ಯಗಳನ್ನು ಕಾಕಸ್ ಪ್ರತಿನಿಧಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ವೈವಿಧ್ಯಮಯ ಈ ಕಾಕಸ್ ಭಾರತ, ನೇಪಾಳ, ಶ್ರೀಲಂಕಾ, ಇಂಡೋನೇಷ್ಯಾ, ಬಾಂಗ್ಲಾದೇಶ, ಭೂತಾನ್, ಪಾಕಿಸ್ತಾನ, ಅಫ್ಗಾನಿಸ್ತಾನ, ಯುನೈಟೆಡ್ ಕಿಂಗ್‌ಡಮ್ ಮತ್ತು ನೆದರ್‌ಲ್ಯಾಂಡ್ಸ್ ಸೇರಿದಂತೆ ವಿವಿಧ ದೇಶಗಳ ಹಿಂದೂಗಳನ್ನು ಪ್ರತಿನಿಧಿಸುತ್ತದೆ.
ಇದು ಸಿಖ್ಖರು, ಜೈನರು ಮತ್ತು ಬೌದ್ಧರಂತಹ ಭಾರತೀಯ ಮೂಲದ ಇತರ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವ ಸದಸ್ಯರನ್ನು ಸಹ ಒಳಗೊಂಡಿದೆ ಎಂದು ಹೇಳಿಕೆ ತಿಳಿಸಿದೆ.
ಕಾಂಗ್ರೆಷನಲ್ ಹಿಂದೂ ಕಾಕಸ್, ಮುಕ್ತ ಉದ್ಯಮ, ಹಣಕಾಸಿನ ಶಿಸ್ತು, ಬಲವಾದ ಕೌಟುಂಬಿಕ ಮೌಲ್ಯಗಳು ಮತ್ತು ನಿರಂಕುಶ ಪ್ರಭುತ್ವಗಳ ವಿರುದ್ಧ ದೃಢವಾದ ವಿದೇಶಾಂಗ ನೀತಿಯ ನಿಲುವನ್ನು ಪ್ರತಿಪಾದಿಸುತ್ತದೆ ಎಂದು ಸಂಸದರು ಹೇಳಿದ್ದಾರೆ.