ಪೆರ್ಲ : ಭಾರತ ಸಂಸ್ಕøತಿ ಪ್ರತಿಷ್ಠಾನ ಬೆಂಗಳೂರು ಹಾಗೂ ಪೆರ್ಲ ಬಜಕುಡ್ಲು ಶ್ರೀ ಧೂಮಾವತೀ ಯುವಬಕ ಸಂಘ ವತಿಯಿಂದ ರಾಮಾಯಣ ಪರೀಕ್ಷೆ ಡಿ. 10ರಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರ್ವಡಸಲೆಯಲ್ಲಿ ಜರುಗಲಿರುವುದು. ಪರೀಕ್ಷಾ ಶುಲ್ಕ 150ರೂ. ನಿಗದಿಪಡಿಸಲಾಗಿದ್ದು, ಇವಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನದೊಂದಿಗೆ ಪದಕ ವಿತರಿಸಲಾಗುವುದು. ಅಯೋಧ್ಯೆಯಯಲ್ಲಿ ಶ್ರೀರಾಮನ ಭವ್ಯ ದೇಗುಲ ತಲೆಯೆತ್ತುತ್ತಿರುವ ಮಧ್ಯೆ ರಾಮಾಯಣದ ಬಗ್ಗೆ ಜನರಲ್ಲಿ ಮತ್ತಷ್ಟು ಜಾಗೃತಿ ಹಾಗೂ ರಾಮಾಯಣ ಕಥಾಭಾಗವನ್ನು ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(9400112744, 9496423631)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.