ನವದೆಹಲಿ : ದೇಶವಾಸಿಗಳ ಪ್ರಗತಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನ ನಡೆಸುತ್ತಿದೆ. ಈ ಪೈಕಿ ಸಧ್ಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಪ್ರಧಾನಮಂತ್ರಿ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಅದ್ರಂತೆ, ಜನವರಿ 1ರಿಂದ ಅರ್ಜಿ ಸಲ್ಲಿಸಬಹುದಾಗಿದೆ.

ಯಾರೆಲ್ಲಾ ಅರ್ಹರು.?
ಈ ವರ್ಷ ಪಿಯುಸಿಯಲ್ಲಿ ಶೇಕಡಾ 60 ಅಂಕಗಳನ್ನ ಪಡೆದವರು ಮತ್ತು ಎಂಬಿಬಿಎಸ್ / ಬಿಡಿಎಸ್ / ಬಿಟೆಕ್ / ಎಂಸಿಎ ನಂತಹ ಕೋರ್ಸ್'ಗಳಿಗೆ ಸೇರಿದವರು ಈ ಯೋಜನೆಯಡಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಅರ್ಜಿ ಸಲ್ಲಿಕೆ ಹೇಗೆ.?
ಪ್ರಧಾನಮಂತ್ರಿ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜನವರಿ 1 ರಿಂದ ಆರಂಭವಾಗಲಿದ್ದು, ಜನವರಿ 5ರವರೆಗೆ ಸಲ್ಲಿಸಬಹುದಾಗಿದೆ. ಅದ್ರಂತೆ, ಕೇಂದ್ರೀಯ ಸೈನಿಕ ಮಂಡಳಿಯ ವೆಬ್ಸೈಟ್ www.ksb.gov.in ಮೂಲಕ ಅರ್ಜಿಗಳನ್ನ ಸಲ್ಲಿಸಬಹುದು.
ವಿದ್ಯಾರ್ಥಿವೇತನ ಎಷ್ಟು ನೀಡಲಾಗುತ್ತೆ.!
ಪ್ರಧಾನಮಂತ್ರಿ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಅಂದ್ರೆ ಬಾಲಕರಿಗೆ 30,000 ರೂಪಾಯಿ, ಬಾಲಕಿಯರಿಗೆ 36,000 ರೂಪಾಯಿ ನೀಡಲಾಗುವುದು.