ತಿರುವನಂತಪುರ: ಪ್ರಧಾನಿಯವರ ಜನಪ್ರಿಯ ನೀತಿಗಳು ಮತ್ತು ಅಭಿವೃದ್ಧಿ ಯೋಜನೆಗಳು ಫಲ ನೀಡಿವೆ. ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಕಾಂಗ್ರೆಸ್ ನೆರವಿನಿಂದ ಬಿಜೆಪಿ ವಶಪಡಿಸಿಕೊಂಡಿದೆ.
ಪ್ರವಾಸೋದ್ಯಮ ಸಚಿವ ಮುಹಮ್ಮದ್ ರಿಯಾಝ್ ಅವರು ಕಾಂಗ್ರೆಸ್ ಸೋಲಿನ ಬಗ್ಗೆ ಸಲಹೆಯೊಂದಿಗೆ ಈ ಹೇಳಿಕೆ ನೀಡಿ ಅಚ್ಚರಿಮೂಡಿಸಿದ್ದಾರೆ.
ಆಡಳಿತವಿರುವ ರಾಜ್ಯಗಳಲ್ಲಿಯೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಕಾಂಗ್ರೆಸ್ಸಿಗರು ಬಿಜೆಪಿಯ ಅಂಡರ್ ಕವರ್ ಏಜೆಂಟ್‍ಗಳಾಗಿ ಬದಲಾಗುತ್ತಿರುವುದು ಸೋಲಿಗೆ ಕಾರಣ ಎಂದು ಸಚಿವರು ಹೇಳಿದ್ದಾರೆ.
ಕಾಂಗ್ರೆಸ್ ಕೇರಳದಲ್ಲಿ ಬಿಜೆಪಿ ವಿರುದ್ಧ ನಿಲುವು ತಳೆಯುತ್ತಿರುವ ಸಿಪಿಎಂ ಅನ್ನು ನಾಶ ಮಾಡಲು ಯತ್ನಿಸುತ್ತಿದೆ. ಕಾಂಗ್ರೆಸ್‍ನ ಈ ಹಿನ್ನಡೆ ದುರದೃಷ್ಟಕರ. ಕಾಂಗ್ರೆಸ್ ಪಾಠ ಕಲಿತು ಮುನ್ನಡೆಯಬೇಕು. ಒಳಜಗಳ ನಿಲ್ಲಿಸಿ ಜಾತ್ಯತೀತ ನಿಲುವು ಅನುಸರಿಸಲು ಕಾಂಗ್ರೆಸ್ ಸಿದ್ಧವಾಗಬೇಕು ಎಂದು ರಿಯಾಜ್ ಸಲಹೆ ನೀಡಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ಸೆಮಿಫೈನಲ್ ಎಂದೇ ಬಿಂಬಿತವಾದ ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಭರವಸೆಯಿಂದ ಗೆಲುವಿನ ನಗೆಯೊಂದಿಗೆ ನಿಟ್ಟುಸಿರು ಬಿಟ್ಟಿದೆ. ಮಧ್ಯಪ್ರದೇಶದಲ್ಲಿ 161, ರಾಜಸ್ಥಾನದಲ್ಲಿ 113 ಮತ್ತು ಛತ್ತೀಸ್‍ಗಢದಲ್ಲಿ 53 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.