ಕಾಸರಗೋಡು: ಕೋಝಿಕ್ಕೋಡ್ ಡೈರಿ ತರಬೇತಿ ಕೇಂದ್ರದ ಆಶ್ರಯದಲ್ಲಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಹೈನುಗಾರರಿಗೆ ಶುದ್ಧ ಹಾಲು ಉತ್ಪಾದನೆ ಎಂಬ ವಿಷಯದ ಕುರಿತು ತರಬೇತಿ ಕಾರ್ಯಕ್ರಮವನ್ನು ಕಾಸರಗೋಡು ಪ್ರಾದೇಶಿಕ ಡೈರಿ ಲ್ಯಾಬ್ ಕಮ್ ತರಬೇತಿ ಕೇಂದ್ರದಲ್ಲಿ ನಡೆಸಲಾಯಿತು.
ಸುಮಾರು 60 ಹೈನುಗಾರರು ಭಾಗವಹಿಸಿದ್ದರು. ಕೋಝಿಕ್ಕೋಡ್ ಡೈರಿ ತರಬೇತಿ ಕೇಂದ್ರದ ಉಪ ಪ್ರಾಂಶುಪಾಲೆ ಎಂ.ಕೆ.ಸ್ಮಿತಾ, ಡೈರಿ ಅಭಿವೃದ್ಧಿ ಅಧಿಕಾರಿ ಎಸ್.ಪ್ರಿಯಾಂಕ, ಡಾ.ಎಂ.ಮಹಮ್ಮದ್ ಆಸಿಫ್ ತರಗತಿ ತೆಗೆದುಕೊಂಡರು. ಪ್ರಾದೇಶಿಕ ಡೈರಿ ಲ್ಯಾಬ್-ತರಬೇತಿ ಕೇಂದ್ರದ ಉಪನಿರ್ದೇಶಕ ಕೆ.ಎಂ.ಶೈಜಿ ಪ್ರಮಾಣ ಪತ್ರ ವಿತರಿಸಿದರು.