ಕಾಸರಗೋಡು: ಇಸ್ರೇಲ್ ಸಾಮ್ರಾಜ್ಯಶಾಹಿ ಧೊರಣೆ ಮಾನವ ಸಂಕುಲಕ್ಕೆ ಮಾರಕಾಗಿ ಪರಿಣಮಿಸುತ್ತಿರುವುದಾಗಿ ಸಿಪಿಎಂ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿಳಿಸಿದ್ದಾರೆ.
ಅವರು ಸಿಪಿಎಂ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಚೆರ್ಕಳದಲ್ಲಿ ಆಯೋಜಿಸಲಾಗಿದ್ದ ಪ್ಯಾಲೆಸ್ತೀನ್ ಐಕ್ಯದಾಢ್ರ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಇಸ್ರೇಲ್‍ನ ಮನುಷ್ಯತ್ವರಹಿತ ಹಾಗೂ ಅಮಾನುಷ ವರ್ತನೆ ಇಂದು ಜಗತ್ತನ್ನು ತಲ್ಲಣಗೊಳಿಸಿದೆ. ವಂಶೀಯ ಹತ್ಯೆಗೆ ಪಣತೊಟ್ಟಿರುವ ಇಸ್ರೇಲನ್ನು ಜಾಗತಿಕ ಮಟ್ಟದಲ್ಲಿ ಒಂಟಿಯಾಗಿಸಬೇಕು ಎಂದು ತಿಳಿಸಿದರು. ಅಯೋಧ್ಯೆ ವಿಚಾರದಲ್ಲಿ ಕೇಂದ್ರ ಸರ್ಕಾರ ಸಂವಿಧಾನವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಖಂಡನೀಯ. ಸಿಪಿಎಂ ಎಲ್ಲಾ ಧರ್ಮವನ್ನೂ ಸಮಾನವಾಗಿ ಪರಿಗಣಿಸುತ್ತಿದ್ದು, ಅಯೋಧ್ಯೆ ವಿಚಾರದಲ್ಲಿ ರಾಜಕೀಯ ದೃಷ್ಟಿಕೋನದಿಂದ ಕೇಂದ್ರ ನಡೆದುಕೊಳ್ಳುತ್ತಿರುವುದರಿಂದ ಅಯೋಧ್ಯೆಯಲ್ಲಿ ಕ್ಷೇತ್ರ ಉದ್ಘಾಟನಾ ಕಾರ್ಯಕ್ರಮವನ್ನು ಸಿಪಿಎಂ ಬಹಿಷ್ಕರಿಸುವುದಾಗಿ ತಿಳಿಸಿದರು.
ಸಿಪಿಎಂ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ವಿ ಬಾಲಕೃಷ್ಣನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಎಚ್ ಕುಞಂಬು ಸ್ವಾಗತಿಸಿದರು.