ಬದಿಯಡ್ಕ : ಉಡುಪಿ ಮಾಧ್ವ ಬ್ರಾಹ್ಮಣ ಸಭಾದ ವತಿಯಿಂದ ನೀಡುವ ಭೀಮಾ ಚಾರಿಟೇಬಲ್ ಟ್ರಸ್ಟ್ ವಿದ್ಯಾರ್ಥಿ ವೇತನಕ್ಕೆ ಕಾಸರಗೋಡು ಜಿಲ್ಲೆಯ ಶಿವಳ್ಳಿ ಬ್ರಾಹ್ಮಣ ಸಭಾದ ಅರ್ಹ ಸದಸ್ಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್‍ಎಸ್‍ಎಲ್‍ಸಿಯಲ್ಲಿ 'ಎ ಪ್ಲಸ್'ನಲ್ಲಿ ತೇರ್ಗಡೆಯಾಗಿ ಇದೀಗ ಪ್ಲಸ್ ವನ್ ಶಿಕ್ಷಣ ಪಡೆಯುತ್ತಿರುವ ಅಥವಾ ಪ್ಲಸ್ ಟು ಅಥವಾ ದ್ವಿತೀಯ ಪಿಯುಸಿ ಶಿಕ್ಷಣದಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾಗಿ ಆಟ್ರ್ಸ್ ಅಥವಾ ಹ್ಯೂಮಾನಿಟಿ ಕಲಿಯುತ್ತಿರುವ ಅಥವಾ ಮೊದಲ ವರ್ಷದ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಶುಲ್ಕ ಪಾವತಿ ರಶೀದಿ, ಆದಾಯ ಪತ್ರದ ಸಹಿತ ಅಗತ್ಯ ದಾಖಲೆಗಳನ್ನು ಅರ್ಜಿಯ ಜತೆಗೆ ಸಲ್ಲಿಸಬೇಕು. ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ವಿವಿಧ ವಲಯಗಳ ಕಾರ್ಯದರ್ಶಿಯವರಿಂದ ಅರ್ಜಿಗಳನ್ನು ಸಂಗ್ರಹಿಸಿ, ಭರ್ತಿಗೊಳಿಸಿ, ಸೂಕ್ತ ದಾಖಲೆಗಳೊಂದಿಗೆ ಡಿ.10ರ ಮೊದಲು ನೀಡಬೇಕೆಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಂಘಟನೆಗಳ ವಲಯ ಕಾರ್ಯದರ್ಶಿಯನ್ನು ಸಂಪರ್ಕಿಸಲು ಕೋರಲಾಗಿದೆ.