ತಿರುವನಂತಪುರಂ: ನವಕೇರಳ ಸಮಾವೇಶಕ್ಕೆ ಗೈರಾದ ಮಹಿಳಾ ಆಟೋ ಚಾಲಕರೊಬ್ಬರಿಗೆ ಸಿಐಟಿಯು ಒಕ್ಕೂಟ ನಿಷೇಧ ಹೇರಿದೆ. ತಿರುವನಂತಪುರದ ಕಟ್ಟೈಕೋಣಂ ಜಂಕ್ಷನ್‍ನಲ್ಲಿ ಆಟೋ ಚಾಲಕರಾಗಿರುವ ಮಂಗಾಟುಕೋಣಂ ಮೂಲದ ರಜಿನಿ ಅವರು ನವ ಕೇರಳ ಸಮಾವೇಶದಲ್ಲಿ ಭಾಗವಹಿಸದ ಕಾರಣ ನೀಡಿ ನಿಷೇಧ ಹೇರಲಾಗಿದೆ.
ಎಂಟು ವರ್ಷಗಳಿಂದ ಕಟ್ಟೈಕೋಣಂ ಜಂಕ್ಷನ್‍ನಲ್ಲಿ ಆಟೋ ಚಾಲಕರಾಗಿ ರಜನಿ ಬದುಕು ನಿರ್ವಹಿಸುತ್ತಿದ್ದಾರೆ. ರಜನಿ ಹಲವು ವರ್ಷಗಳಿಂದ ಪಕ್ಷದ ಸದಸ್ಯೆ ಹಾಗೂ ಸಿಐಟಿಯು ಸದಸ್ಯೆಯಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ನವಕೇರಳ ಸಮಾವೇಶದಲ್ಲಿ ಭಾಗವಹಿಸಿರಲಿಲ್ಲ ಎನ್ನುತ್ತಾರೆ ರಜಿನಿ. ಹಮಾಲಿಯಾಗಿರುವ ಇವರ ಸಹೋದರನ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.