HEALTH TIPS

ಗೂಗಲ್, ಇನ್ಸ್ಟಾಗ್ರಾಮ್ ಗುರು; ಕೊರೋನಾ ರಜಾ ಕಾಲದಲ್ಲಿ ಬೆಳೆಸಿದ ಹವ್ಯಾಸ: ಪರಿಪೂರ್ಣ ಕಲಾವಿದೆಯಾಗಿ ಹೊರ ಹೊಮ್ಮಿದ ಸ್ಮೃತಿ ಕಡಮಾಜೆ

                  ಪೆರ್ಲ: ಕಲೆಯು ಕೂಡಾ ಒಂದು ಮಾದ್ಯಮವೇ ಆಗಿದೆ. ಚಿತ್ರ ಕಲಾವಿದನ ಹೃದಯಾಂತರಾಳದಲ್ಲಿ ಉದ್ಭವಿಸುವ ಪ್ರೇರಣೆಯಿಂದ ರಚಿಸಲಾಗುವ ಕಲಾ ಚಿತ್ತಾರಗಳು ವೀಕ್ಷಕನಿಗೆ ಸತ್ಯ, ಸತ್ವ ಮತ್ತು ಭಾವನಾತ್ಮಕತೆಯ ಸಂದೇಶ ನೀಡುತ್ತವೆ. ಕಲಾವಿದ ಅಭಿವ್ಯಕ್ತಿಗೊಳಿಸಿದ ಸುಂದರವಾದ ಕಾಲಾಕೃತಿಗಳು ನೋಡುಗರ ಮನಸ್ಸಿಗೆ ಅಲೌಕಿಕವಾದ ಆನಂದ ನೀಡುತ್ತದೆ.  

              ಕೊರೋನಾ ರಜಾ ಕಾಲದಲ್ಲಿ ಏನು ಮಾಡಬೇಕೆಂದು ತೋಚದೆ, ಹಲವರು ರಚನಾತ್ಮಕ ಮತ್ತು ಪ್ರಾಯೋಗಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದೇ ರೀತಿ ಪ್ರಸ್ತುತ ಪುತ್ತೂರು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜಿನಲ್ಲಿ ದ್ವಿತೀಯ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ) ಅಧ್ಯಯನ ನಡೆಸುತ್ತಿರುವ ಪಾಣಾಜೆ ಆರ್ಲಪದವು ಸಮೀಪ ಕಡಮಾಜೆಯ ಸೃತಿ ಕೆ.ಎಸ್. ಕೊರೋನಾ ರಜಾ ಕಾಲದಲ್ಲಿ ಬೆಳೆಸಿದ ಹವ್ಯಾಸದಿಂದಾಗಿ ಈಗ ಪರಿಪೂರ್ಣ ಕಲಾವಿದೆಯಾಗಿ ಹೊರ ಹೊಮ್ಮಿದ್ದಾಳೆ. 


       1ರಿಂದ 4ನೇ ತರಗತಿಯವರೆಗೆ ಆರ್ಲಪದವು ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸ್ಮೃತಿ, ಬೆಟ್ಟಂಪಾಡಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ರಿಂದ ಎಸ್ಸೆಸ್ಸೆಲ್ಸಿ ತನಕ ಅಧ್ಯಯನ ಮುಂದುವರಿಸಿದ್ದಾಳೆ. 


        ಕೊರೋನಾದಿಂದಾಗಿ ಸ್ಮೃತಿಯ ಎಸ್ಸೆಸ್ಸೆಲ್ಸಿ ಬ್ಯಾಚ್ ಪರೀಕ್ಷೆ ಮುಂದೂಡಲ್ಪಟ್ಟಿತು. ಆಗ ಪಠ್ಯದೊಂದಿಗೆ ಪೆನ್ ಆರ್ಟ್ ಚಿತ್ರ ರಚನೆಯ ಆಸಕ್ತಿ ಹೊಂದಿ ಗೂಗಲ್, ಇನ್ಸ್ಟಾಗ್ರಾಮ್ ನೋಡಿ ಚಿತ್ರ ರಚನೆ ಆರಂಭಿಸಿದ್ದಾಳೆ. ನವಿಲಿನಿಂದ ತೊಡಗಿದ ಆಕೆಯ ಚಿತ್ರಕಲೆ ದೇಶ ಭಕ್ತಿ, ಧಾರ್ಮಿಕ, ಪ್ರಾಣಿ ಸಂಕುಲ, ಮಿಕ್ಕಿ ಮೌಸ್ , 3ಡಿ  ಆರ್ಟ್ ಸಹಿತ ಸಮಾಕಾಲೀನ ಸ್ಫೂರ್ತಿ ಅಳವಡಿಸಿಕೊಂಡು ಹೆಚ್ಚು ಹೆಚ್ಚು ಕಲಾ ಚಟುವಟಿಕೆಯಲ್ಲಿ ನಿರತಳಾಗಿ ಉತ್ತಮ, ಸೃಜನಶೀಲ ಕಲಾವಿದಳಾಗಿ ರೂಪುಗೊಂಡಿದ್ದಾಳೆ. ಮಂಡಲ ಚಿತ್ರ ರಚನೆ ಸ್ಮೃತಿಯ ಆಸಕ್ತಿಯ ರಚನೆಯಾಗಿದೆ.

           ಪುತ್ತೂರು ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದ ಸ್ಮೃತಿ ಪ್ರಸ್ತುತ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ಪದವಿ ಅಧ್ಯಯನ ನಡೆಸುತ್ತಿದ್ದಾಳೆ. ಈಗಲೂ ಆಕೆಯ ಮೌಲ್ಯಯುತ ಕಲೆ, ಶಾಶ್ವತ ಅವಿμÁ್ಕರದ ರೂಪದಲ್ಲಿ ಹೊರಬರುತ್ತಿದೆ. 


           ಕಡಮಾಜೆಯ ಶ್ರೀನಿವಾಸ ಬೋಳಿಲ್ಲಾಯ, ಕೀರ್ತಿ ಕೆ.ಎಸ್. ದಂಪತಿಯ ಪುತ್ರಿಯಾದ ಸ್ಮೃತಿ ಕೆ.ಎಸ್. ಅಧ್ಯಯನದಲ್ಲೂ ಚುರುಕಾಗಿದ್ದು, ಶಾಸ್ತ್ರೀಯ ಸಂಗೀತದಲ್ಲೂ ಅಭಿರುಚಿ ಹೊಂದಿದ್ದಾಳೆ. ಈಕೆಯ ತಂಗಿ ಸಿಂಚನ ಕೆ.ಎಸ್.ಪುತ್ತೂರು ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದಿಕೊಂಡಿದ್ದಾಳೆ. ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಸಿಂಚನ ಪುತ್ತೂರಿನ ಉದಯಗಾನ ತರಬೇತಿ ಕೇಂದ್ರದಲ್ಲಿ ಆನ್ ಲೈನ್ ಮೂಲಕ ಶಾಸ್ತ್ರೀಯ ಸಂಗೀತ ಅಭ್ಯಸಿಸುತ್ತಿದ್ದಾಳೆ.  


         ಅಭಿಮತ: 

     "ಕೊರೋನಾ ಕಾಲದ ರಜೆಯಲ್ಲಿ ಬೆಳೆಸಿದ ಪೆನ್ ಆರ್ಟ್ ಹವ್ಯಾಸವನ್ನು ಬಿಡುವಿನ ವೇಳೆ  ಈಗಲೂ ಮುಂದುವರಿಸಿದ್ದಾಳೆ. ಅವಳ ಕಲಾ ಅಭಿರುಚಿಗೆ ಅಗತ್ಯವಾದ ಪರಿಕರಗಳನ್ನು ಒದಗಿಸಿ ಪ್ರೋತ್ಸಾಹ ನೀಡುತ್ತಿದ್ದೇವೆ" 

                                              -ಕೀರ್ತಿ ಕೆ.ಎಸ್.ಕಡಮಾಜೆ

                                                      ಸ್ಮೃತಿಯ ತಾಯಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries