ಸ್ಯಾಂಟಿಯಾಗೊ: ಅಮೋಘ ಆಟವಾಡಿದ ಭಾರತ ತಂಡವು ಎಫ್‌ಐಎಚ್ ಮಹಿಳೆಯರ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ 12-0 ಯಿಂದ ಕೆನಡಾ ತಂಡವನ್ನು ಬುಧವಾರ ಸುಲಭವಾಗಿ ಮಣಿಸಿತು.
ಸ್ಯಾಂಟಿಯಾಗೊ: ಅಮೋಘ ಆಟವಾಡಿದ ಭಾರತ ತಂಡವು ಎಫ್‌ಐಎಚ್ ಮಹಿಳೆಯರ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ 12-0 ಯಿಂದ ಕೆನಡಾ ತಂಡವನ್ನು ಬುಧವಾರ ಸುಲಭವಾಗಿ ಮಣಿಸಿತು.
ಭಾರತ ತಂಡದ ಮುಮ್ತಾಜ್ ಖಾನ್ (26, 41, 54, 60ನೇ ನಿ) ನಾಲ್ಕು ಗೋಲು ಗಳಿಸಿದರೆ, ಅನ್ನು (4, 6, 39ನೇ ನಿ) ಹಾಗೂ ದೀಪಿಕಾ ಸೋರೆಂಗ್ (34, 50, 34ನೇ ನಿ) ಹ್ಯಾಟ್ರಿಕ್ ಗೋಲು ಬಾರಿಸಿದರು.
ಪೆನಾಲ್ಟಿ ಕಾರ್ನರ್‌ನಲ್ಲಿ ದೊರೆತ ಅವಕಾಶ ಸದುಪಯೋಗ ಪಡಿಸಿಕೊಂಡ ಅನ್ನು ಆರಂಭದಲ್ಲಿಯೇ ಎರಡು ಗೋಲು ಗಳಿಸಿದರು. ಎರಡು ಗೋಲುಗಳ ಮುನ್ನಡೆಯೊಂದಿಗೆ ಆಕ್ರಮಣಕಾರಿ ಆಟ ಮಂದುವರಿಸಿದ ಭಾರತ, ಕೆನಡಾ ಮೇಲೆ ಒತ್ತಡ ಹೇರಿತು. ಮೊದಲ ಕ್ವಾರ್ಟರ್‌ನಲ್ಲಿ 2-0 ಗೋಲುಗಳಿಂದ ಮುನ್ನಡೆಯಲ್ಲಿದ್ದ ಭಾರತ, ಆಟದ ಕೊನೆವರೆಗೂ ಮೇಲುಗೈ ಸಾಧಿಸಿತು. ದೀಪಿ, ಮುಮ್ತಾಜ್ ಗಳಿಸಿದ ಗೋಲುಗಳಿಂದ ಮುನ್ನಡೆ ಕಾಯ್ದುಕೊಂಡಿತು.
ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಕೆನಡಾ ಆಟಗಾರ್ತಿಯರು ಕೈಚೆಲ್ಲಿದರು. ಚೆಂಡು ಅನ್ನು ಗುರಿ ಮುಟ್ಟಿಸುವಲ್ಲಿ ವಿಫಲವಾದರು. ಎರಡನೇ ಕ್ವಾರ್ಟರ್ ಮುಗಿದ ವೇಳೆ ಭಾರತ 4-0 ಗೋಲುಗಳ ಮುನ್ನಡೆಯಲ್ಲಿತ್ತು. ದೀಪಿಕಾ ಮತ್ತು ಮುಮ್ತಾಜ್ ಅವರು ಹ್ಯಾಟ್ರಿಕ್ ಗೋಲು ತಂದಿತ್ತರು.
ಮುಂದಿನ ಪಂದ್ಯ ಶುಕ್ರವಾರ ಜರ್ಮಿನಿ ವಿರುದ್ಧ ಭಾರತ ಸೆಣಸಲಿದೆ.