ಕಾಸರಗೋಡು: ಕೇರಳ ಸರ್ಕಾರದ ಶಿಕ್ಷಣ ಇಲಾಖೆಯ ಸ್ಮಾರ್ಟ್ ಯೋಜನೆಯಂಗವಾಗಿ ಪ್ರೌಢಶಾಲಾ ಕನ್ನಡ ಭಾಷಾ ಅಧ್ಯಾಪಕರಿಗೆ ಕಾಸರಗೋಡು ಮಾಯಿಪ್ಪಾಡಿಯ ಡಯೆಟ್ ನೇತೃತ್ವದಲ್ಲಿ ಆಯೋಜಿಸಿದ ಮೂರು ದಿನಗಳ ರಾಜ್ಯ ಮಟ್ಟದ ತರಬೇತಿ ಶಿಬಿರ ಕಾಸರಗೋಡಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಜರುಗಿತು.
ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ನಂದಿಕೇಶನ್ ಶಿಬಿರ ಉದ್ಘಾಟಿಸಿದರು. ಡಯೆಟ್ ಪ್ರಾಂಶುಪಾಲ ಡಾ.ರಘುರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ಅಧ್ಯಾಪಕರಾದ ರಾಮಣ್ಣ ಮಾಸ್ಟರ್ ದೇಲಂಪಾಡಿ ಉಪಸ್ಥಿತರಿದ್ದರು. ಭಾಗ್ಯಲಕ್ಷ್ಮಿ ಟೀಚರ್ ಪ್ರಾರ್ಥನೆ ಹಾಡಿದರು. ಡಯೆಟ್ ಪ್ರಾಧ್ಯಾಪಕಿ ಪುಷ್ಪಲತಾ ಸ್ವಾಗತಿಸಿದರು. ದಿವ್ಯಗಂಗಾ ಪಿ, ವಂದಿಸಿದರು. ಸಂಪನ್ಮೂಲ ಅಧ್ಯಾಪಕರಾದ ರಾಮಣ್ಣ ದೇಲಂಪಾಡಿ, ದಿವ್ಯಗಂಗಾ ಪಿ, ರೋಹಿತಾಕ್ಷಿ ಕೆ.ಬಿ ,ಭಾಗ್ಯಲಕ್ಷ್ಮೀ ಬೇಕೂರು, ಅವರು ತರಗತಿ ನಡೆಸಿದರು.